ತಮಿಳು ನಟ, ಡಿಎಂಕೆ ಕಾರ್ಯದರ್ಶಿ  ಉದಯನೀತಿ ಸ್ಟಾಲಿನ್ ವಿರುದ್ಧ 5 ಠಾಣೆಗಳಲ್ಲಿ ದೂರು ದಾಖಲು - Mahanayaka

ತಮಿಳು ನಟ, ಡಿಎಂಕೆ ಕಾರ್ಯದರ್ಶಿ  ಉದಯನೀತಿ ಸ್ಟಾಲಿನ್ ವಿರುದ್ಧ 5 ಠಾಣೆಗಳಲ್ಲಿ ದೂರು ದಾಖಲು

21/11/2020

ತಿರುಚ್ಚಿ:  ಡಿಎಂಕೆ ಯುವ ಕಾರ್ಯದರ್ಶಿ, ತಮಿಳು ಚಿತ್ರ ನಟ ಉದಯನಿಧಿ ಸ್ಟಾಲಿನ್ ಅವರ ವಿರುದ್ಧ ತಿರುಚ್ಚಿ ಜಿಲ್ಲೆಯ 5 ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಾಗಿದ್ದು, ಅವರನ್ನು ಇಂದು ಬಂಧಿಸಲಾಗಿತ್ತು. ಅವರ ಮೇಲೆ ಕೊವಿಡ್ ನಿಯಮಗಳ ಉಲ್ಲಂಘನೆಯ ಆರೋಪ ಮಾಡಲಾಗಿದೆ.

ತಿರುಚ್ಚಿಯಲ್ಲಿ ನವೆಂಬರ್ 20ರಂದು ನಡೆದ ವಿವಿಧ ಕಾರ್ಯಕ್ರಮಗಳಲ್ಲಿ  ತಮಿಳುನಾಡು ಸರ್ಕಾರ ಕೊರೊನಾ ಹಿನ್ನೆಲೆಯಲ್ಲಿ ಹಾಕಲಾಗಿದ್ದ ನಿಯಮಗಳನ್ನು ಉಲ್ಲಂಘನೆ ಮಾಡಲಾಗಿದೆ ಎಂದು ಉದಯನಿಧಿ ಸ್ಟಾಲಿನ್ ವಿರುದ್ಧ ದೂರು ದಾಖಲಿಸಲಾಗಿದೆ.


Provided by

ಆರೋಗ್ಯ ಕಾಯ್ದೆಯಡಿಯಲ್ಲಿ ಕೊರೊನಾ ಹರಡಲು ಈ ಕಾರ್ಯಕ್ರಮಗಳ ಕಾರಣವಾಗಿದೆ. ಜೊತೆಗೆ ಈ ಕಾರ್ಯಕ್ರಮಗಳಿಗೆ ಅನುಮತಿಯನ್ನು ಕೂಡ ಪಡೆದುಕೊಂಡಿಲ್ಲ. ಈ ಕಾರ್ಯಕ್ರಮದಿಂದ ಸಾರ್ವಜನಿಕರಿಗೆ ತೊಂದರೆಯಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ತಿರುಚ್ಚಿ ಚಿಂತಮಣಿ ಅನ್ನಸಿಲಾ ಬಳಿ ಉದಯನೀತಿ ಸ್ಟಾಲಿನ್ ಅವರನ್ನು ಸ್ವಾಗತಿಸಿದ್ದಕ್ಕಾಗಿ ಡಿಎಂಕೆ ಪ್ರದೇಶ ಕಾರ್ಯದರ್ಶಿ ಮತಿವಾನನ್ ಸೇರಿದಂತೆ 350 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಇತ್ತೀಚಿನ ಸುದ್ದಿ