ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಗೆ ಮತ್ತೊಂದು ಸಂಕಷ್ಟ! - Mahanayaka

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಗೆ ಮತ್ತೊಂದು ಸಂಕಷ್ಟ!

21/11/2020

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಸಿಬಿಐ ಅಧಿಕಾರಿಗಳು ಸಮನ್ಸ್ ನೀಡಿದ್ದು, ಮಗಳ ನಿಶ್ಚಿತಾರ್ಥ ಕಾರ್ಯಕ್ರಮದ ಸಂಭ್ರಮದಲ್ಲಿದ್ದ ಡಿಕೆಶಿಗೆ ಇದೀಗ ಮತ್ತೊಮ್ಮೆ ಸಿಬಿಐ ರೂಪದಲ್ಲಿ ಸಂಕಷ್ಟ ಎದುರಾಗಿದೆ.

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಬಿಐ ನಂದ ಸಮನ್ಸ್ ಬಂದಿರುವುದು ನಿಜ. ನ.19 ರಂದು ನನಗೆ ಸಮನ್ಸ್ ಜಾರಿ ಆಗಿದೆ. ನ.25ರಂದು ವಿಚಾರಣೆಗೆ ಹಾಜರಾಗುತ್ತೇನೆ. ನ.19ರಂದು ನಾನು ಮಗಳ ಕಾರ್ಯಕ್ರಮದಲ್ಲಿ ಬ್ಯುಸಿ ಇದ್ದೆ. ಆಗ ನಮ್ಮ ಕಚೇರಿಗೆ ಬಂದು ಸಮನ್ಸ್ ಕೊಟ್ಟು ಹೋಗಿದ್ದಾರೆ ಎಂದು ಅವರು ಹೇಳಿದ್ದಾರೆ.

23 ಕ್ಕೆ ಹಾಜರಾಗುವಂತೆ ಅಧಿಕಾರಿಗಳು ಹೇಳಿದ್ದರು. ಆದರೆ, ನಾಳೆಯಿಂದ ಉತ್ತರ ಕರ್ನಾಟಕ ಪ್ರವಾಸ ಆಯೋಜಿಸಲಾಗಿದೆ. ನಾನು ಸಿಬಿಐ ಅಧಿಕಾರಿಗೆ ಕರೆ ಮಾಡಿ ಮನವಿ ಮಾಡಿ, ನಾನು ಉತ್ತರ ಕರ್ನಾಟಕ ಪ್ರವಾಸ ಇರುವುದರಿಂದ 25 ಕ್ಕೆ ಹಾಜರಾಗುತ್ತೇನೆ ಅಂತ ಕೇಳಿದೆ, ಅವರು ಒಪ್ಪಿಗೆ ನೀಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿ