ಕರ್ನಾಟಕ ಬಂದ್: ಪ್ರತಿಭಟನೆ ಮಾಡಿ ಆದರೆ, ಈ ರೀತಿ ಮಾಡಲು ಅವಕಾಶ ನೀಡುವುದಿಲ್ಲ ಎಂದ ಸಿಎಂ! - Mahanayaka
7:27 PM Wednesday 11 - September 2024

ಕರ್ನಾಟಕ ಬಂದ್: ಪ್ರತಿಭಟನೆ ಮಾಡಿ ಆದರೆ, ಈ ರೀತಿ ಮಾಡಲು ಅವಕಾಶ ನೀಡುವುದಿಲ್ಲ ಎಂದ ಸಿಎಂ!

21/11/2020

ಬೆಂಗಳೂರು: ಡಿಸೆಂಬರ್ 5ರಂದು ಕನ್ನಡ ಪರ ಸಂಘಟನೆಗಳು ಕರೆ ನೀಡಿರುವ ಬಂದ್ ಕರೆಯ ಬಗ್ಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಯಡಿಯೂರಪ್ಪ, ಬಲವಂತದ ಬಂದ್ ಗೆ ಮಾಡಲು ನಾವು ಅವಕಾಶ ಕೊಡುವುದಿಲ್ಲ ಎಂದು ಹೇಳಿದ್ದಾರೆ.

ನಾನು ಕನ್ನಡದ ಪರವಾಗಿ, ಕನ್ನಡಿಗರ ಪರವಾಗಿ ಇದ್ದೇನೆ. ಕನ್ನಡಿಗರಿಗೆ ಬೇಕಾದ ಹೆಚ್ಚಿನ ಸೌಲಭ್ಯ ಒದಗಿಸಲು ನಾನು ಸಿದ್ಧನಿದ್ದೇನೆ ಆದರೆ, ಬೇರೆ ಕಾರಣಗಳಿಗಾಗಿ ಬಂದ್ ಗೆ ಕರೆ ನೀಡುವುದು ಸೂಕ್ತ ಅಲ್ಲ ಎಂದು ಯಡಿಯೂರಪ್ಪ ಹೇಳಿದರು.

ಪ್ರತಿಭಟನಕಾರರು ಪ್ರತಿಕೃತಿ‌ ದಹನ ಮಾಡುವುದು, ಕೆಟ್ಟದಾಗಿ ನಡೆದುಕೊಳ್ಳುತ್ತಿರುವುದನ್ನು ಗಮನಿಸುತ್ತಿದ್ದೇನೆ, ಇಂತಹವರ ವಿರುದ್ಧ ಬಹಳ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ ಎಂದು ಯಡಿಯೂರಪ್ಪ ಹೇಳಿದರು.


Provided by

ಶಾಂತಿಯುತವಾಗಿ ಪ್ರತಿಭಟನೆ ಮಾಡಲಿ, ಪ್ರತಿಭಟನೆಗೆ ಬೇರೆ ಸ್ಚರೂಪ ಕೊಡುವುದು ಸರಿಯಲ್ಲ. ಎಲ್ಲ ವರ್ಗಗಳಿಗೂ ಸರ್ಕಾರ ನ್ಯಾಯ ಒದಗಿಸುವ ಕೆಲಸ ಮಾಡುತ್ತಿದೆ. ಸರ್ಕಾರ ಯಾರ ನಡುವೆಯೂ ಭೇದ ಭಾವ ಮಾಡುತ್ತಿಲ್ಲ. ಸರ್ಕಾರದ ಉದ್ದೇಶ ಅರ್ಥ ಮಾಡಿಕೊಂಡು ಸಹಕಾರ ಕೊಡಬೇಕು ಎಂದು ಮುಖ್ಯಮಂತ್ರಿ ಮನವಿ ಮಾಡಿದರು.

ಇತ್ತೀಚಿನ ಸುದ್ದಿ