ಪುಸ್ತಕ ಹಿಡಿಯ ಬೇಕಿದ್ದ ಕೈಗಳಿಗೆ ತಲವಾರು ಹಂಚಿದ ಶಾಸಕ!
ಪಾಟ್ನಾ: ಪ್ರಚಾರಕ್ಕಾಗಿ ರಾಜಕಾರಣಿಗಳು ಒಂದಲ್ಲ ಒಂದು ಸರ್ಕಸ್ ಮಾಡುತ್ತಲೇ ಇರುತ್ತಾರೆ ಇಲ್ಲೊಬ್ಬ ಶಾಸಕ ಪುಸ್ತಕ ಹಿಡಿಯ ಬೇಕಿರುವ ಮಕ್ಕಳ ಕೈಗೆ ತಲವಾರು ಕೊಟ್ಟು ವಿವಾದಕ್ಕೆ ಕಾರಣವಾಗಿದ್ದಾರೆ.
ಬಿಹಾರದ ಸೀತಾಮಹಿರ್ ಜಿಲ್ಲೆಯಲ್ಲಿ ನಡೆದ ವಿಜಯದಶಮಿ ಆಚರಣೆ ವೇಳೆ ಬಿಜೆಪಿ ಶಾಸಕ ಮಿಥಿಲೇಶ್ ಕುಮಾರ್ ಹೆಣ್ಣು ಮಕ್ಕಳಿಗೆ ಕತ್ತಿ ಹಂಚಿ ವಿವಾದಕ್ಕೀಡಾಗಿದ್ದಾರೆ.
ಬಳಿಕ ಮಾತನಾಡಿದ ಅವರು, ದುಷ್ಟರು ನಮ್ಮ ಸಹೋದರಿಯರನ್ನು ಸ್ಪರ್ಶಿಸಲು ಧೈರ್ಯಮಾಡಿದರೆ, ಅವರ ಕೈಯನ್ನು ಈ ಖಡ್ಗದಿಂದ ಕತ್ತರಿಸಲು ಪ್ರೇರೇಪಿಸಿದರು.
ನಾವು ನಮ್ಮ ಸಹೋದರಿಯರನ್ನು ಅವರ ಕೈಗಳನ್ನು ಕತ್ತರಿಸುವ ಸಾಮರ್ಥ್ಯವನ್ನು ಮಾಡಬೇಕು ಮತ್ತು ಅಗತ್ಯವಿದ್ದರೆ, ನಾನು ಮತ್ತು ನೀವೆಲ್ಲರೂ ಇದನ್ನು ಮಾಡಬೇಕಾಗಿದೆ. ನಮ್ಮ ಸಹೋದರಿಯರ ವಿರುದ್ಧ ಕೆಟ್ಟ ಇಚ್ಛೆಯನ್ನು ಹೊಂದಿರುವ ಎಲ್ಲಾ ದುಷ್ಟರನ್ನು ನಾಶಪಡಿಸಬೇಕು ಎಂದು ಕುಮಾರ್ ಕರೆ ನೀಡಿದ್ದಾರೆ.
ಮಿಥಿಲೇಶ್ ಕುಮಾರ್ ಅವರು ತಮ್ಮ ಉಪಕ್ರಮಕ್ಕೆ ಜನರು ಬೆಂಬಲ ನೀಡುವಂತೆ ಮನವಿ ಮಾಡಿದರು ಮತ್ತು ದುಷ್ಕರ್ಮಿಗಳ ವಿರುದ್ಧ ಕಾರ್ಯನಿರ್ವಹಿಸಲು ಜನರನ್ನು, ವಿಶೇಷವಾಗಿ ಮಹಿಳೆಯರನ್ನು ಪ್ರೋತ್ಸಾಹಿಸಿದರು. ಶಾಲಾ–ಕಾಲೇಜಿಗೆ ಹೋಗುವ ಹೆಣ್ಣು ಮಕ್ಕಳಿಗೆ ಕತ್ತಿಗಳನ್ನು ವಿತರಿಸಿದರು.
ಕಾನೂನು ಕಾಪಾಡಬೇಕಿರುವ ಶಾಸಕ, ಕಾನೂನು ಕೈಗೆತ್ತಿಕೊಳ್ಳಲು ಪ್ರೇರೇಪಣೆ ನೀಡಿರುವುದು ಇದೀಗ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ಹೆಣ್ಣು ಮಕ್ಕಳ ರಕ್ಷಣೆಗೆ ಪೊಲೀಸ್ ವ್ಯವಸ್ಥೆಗಳಿವೆ, ಕಾನೂನು ಇದೆ, ಕೋರ್ಟ್ ಗಳಿವೆ, ಆದರೆ ತಮ್ಮ ಸ್ವ ಪ್ರಚಾರಕ್ಕಾಗಿ ಈ ರೀತಿಯಾಗಿ ಕಾನೂನು ಕೈಗೆತ್ತಿಕೊಳ್ಳಲು ಪ್ರೇರಣೆ ನೀಡುವವರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು ಎನ್ನುವ ಒತ್ತಾಯ ಕೇಳಿ ಬಂದಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: