ಪಾರ್ಲಿಮೆಂಟ್ ಆವರಣದಲ್ಲೇ ಸಬರ್ ಮತಿ ರಿಪೋರ್ಟ್ ಸಿನಿಮಾ ವೀಕ್ಷಿಸಿದ ಮೋದಿ ಸಂಪುಟದ ಸಚಿವರು - Mahanayaka

ಪಾರ್ಲಿಮೆಂಟ್ ಆವರಣದಲ್ಲೇ ಸಬರ್ ಮತಿ ರಿಪೋರ್ಟ್ ಸಿನಿಮಾ ವೀಕ್ಷಿಸಿದ ಮೋದಿ ಸಂಪುಟದ ಸಚಿವರು

03/12/2024

ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಮತ್ತು ಕೇಂದ್ರ ಸಚಿವ ಸಂಪುಟದ ಇತರ ಸಚಿವರಿಗೆ ಪಾರ್ಲಿಮೆಂಟ್ ಆವರಣದಲ್ಲಿ ಸಬರ್ ಮತಿ ರಿಪೋರ್ಟ್ ಎಂಬ ಸಿನಿಮಾವನ್ನು ಪ್ರದರ್ಶಿಸಲಾಗಿದೆ. ಪಾರ್ಲಿಮೆಂಟಿನ ಎರಡೂ ಸದನಗಳ ಸಭೆ ಮುಗಿದ ಬಳಿಕ ಈ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. 2002ರ ಗುಜರಾತ್ ಹತ್ಯಾಕಾಂಡಕ್ಕೆ ಕಾರಣ ಎಂದು ಹೇಳಲಾಗುತ್ತಿರುವ ಗೋದ್ರಾ ಸಬರಮತಿ ರೈಲು ಬೆಂಕಿ ಗಾಹುತಿಯಾದ ವಿಷಯದಲ್ಲಿ ಬಿಜೆಪಿಯ ನಿಲುವನ್ನು ಈ ಸಿನಿಮಾ ಸಮರ್ಥಿಸುತ್ತದೆ ಎಂದು ಹೇಳಲಾಗಿದೆ.

ಈ ಮೊದಲು ಈ ಸಿನಿಮಾವನ್ನು ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಸಚಿವ ಸಂಪುಟದ ಸಹೋದ್ಯೋಗಿಗಳು ಮೆಚ್ಚಿಕೊಂಡು ಮಾತಾಡಿದ್ದರು. ಧೀರಜ್ ಸರ್ನ ಅವರು ಈ ಸಿನಿಮಾವನ್ನು ನಿರ್ದೇಶಿಸಿದ್ದಾರೆ ಮತ್ತು ಬಾಲಿವುಡ್ ನಟ ವಿಕ್ರಾಂತ್ ಮಾಸ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.

ನವೆಂಬರ್ 29ರಂದು ಈ ಸಿನಿಮಾ ಬಿಡುಗಡೆಗೊಂಡಿತ್ತು.
2002ರಲ್ಲಿ ನರೇಂದ್ರ ಮೋದಿಯವರು ಗುಜರಾತ್ ನ ಮುಖ್ಯಮಂತ್ರಿ ಆಗಿದ್ದಾಗ ಗೋಧ್ರಾದಲ್ಲಿ ರೈಲು ಬೆಂಕಿ ಗಾಹುತಿಯಾಗಿತ್ತು. ಅಯೋಧ್ಯೆಯಿಂದ ಗುಜರಾತಿಗೆ ಮರಳುತ್ತಿದ್ದ 60ರಷ್ಟು ಕನಸೇವಕರು ಈ ರೈಲು ದುರ್ಘಟನೆಯಲ್ಲಿ ಸಾವಿಗೀಡಾಗಿದ್ದರು. ಮುಸ್ಲಿಮರು ಈ ರೈಲಿಗೆ ಬೆಂಕಿ ಹಚ್ಚಿದ್ದಾರೆ ಎಂದು ಪೊಲೀಸರು ವಾದಿಸಿದ್ದರು.

ಆದರೆ ಅಪಘಾತದಿಂದಾಗಿ ರೈಲಿಗೆ ಬೆಂಕಿ ಹಚ್ಚಿಕೊಂಡಿದೆ ಎಂಬ ವಾದವೂ ಇತ್ತು. ಮನಮೋಹನ್ ಸಿಂಗ್ ಸರಕಾರ ನೇಮಿಸಿದ್ದ ತನಿಖಾ ಸಮಿತಿಯು ಅಪಘಾತದಿಂದಾಗಿ ರೈಲಿಗೆ ಬೆಂಕಿ ಹತ್ತಿಕೊಂಡಿದೆ ಎಂಬ ವಾದವನ್ನು ಸಮರ್ಥಿಸಿತ್ತು.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ