ವಿಧಾನಸೌಧದಲ್ಲಿ ಬೆಳಗ್ಗೆ ಮನಿ- ಸಂಜೆ ಹನಿ: ನಿಖಿಲ್ ಕುಮಾರಸ್ವಾಮಿ ವಾಗ್ದಾಳಿ - Mahanayaka

ವಿಧಾನಸೌಧದಲ್ಲಿ ಬೆಳಗ್ಗೆ ಮನಿ– ಸಂಜೆ ಹನಿ: ನಿಖಿಲ್ ಕುಮಾರಸ್ವಾಮಿ ವಾಗ್ದಾಳಿ

nikhil kumaraswamy
26/03/2025

ಬೆಂಗಳೂರು:  ವಿಧಾನಸೌಧದಲ್ಲಿ ಬೆಳಗ್ಗೆ ಮನಿ ಹಾಗೂ ಸಂಜೆ ಹನಿ ಎಂಬ ವಾತಾವರಣ ಇದೆ ಎಂದು ಜೆಡಿಎಸ್ ನಾಯಕ ನಿಖಿಲ್ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

ಸಚಿವ ಕೆ.ಎನ್.ರಾಜಣ್ಣ ಹನಿಟ್ರ್ಯಾಪ್ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು,  ದೇವಾಲಯದಂತಹ ವಿಧಾನಸೌಧದಲ್ಲಿ ಬೆಳಗ್ಗೆ ಮನಿ, ಸಂಜೆ ಹನಿ ಬಗ್ಗೆ ಚರ್ಚೆ ಆಗ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ವಿಧಾನಸೌಧದ ಒಳಗೆ ಅನೇಕ ಪುಣ್ಯಾತ್ಮರು ಆಡಳಿತ ಕೊಟ್ಟಿದ್ದಾರೆ. ಇಂತಹ ದೇವಾಲಯದಲ್ಲಿ ಬೆಳಗ್ಗೆ ಮನಿ, ಸಂಜೆ ಹನಿ ಆಗ್ತಿದೆ ಎಂದು ನಿಖಿಲ್ ಕುಮಾರಸ್ವಾಮಿ  ಹೇಳಿದ್ದಾರೆ.

ಕ್ಯಾಬಿನೆಟ್ ಸಚಿವರಿಗೆ ರಕ್ಷಣೆ ಇಲ್ಲ. ಬೇರೆ ಅವರ ಕಥೆ ಏನು? 48 ಜನರ ಸಿಡಿ ಇದೆ ಎಂದು ಹೇಳ್ತಾರೆ. ಒಂದು ಕುರ್ಚಿಗೋಸ್ಕರ ಈ ಮಟ್ಟಕ್ಕೆ ರಾಜಕೀಯ ಮಾಡ್ತಿದ್ದಾರೆ. ಸಿಡಿ ಫ್ಯಾಕ್ಟರಿ ಮಾಲೀಕರ ಯಾರು? ಎಳೂವರೆ ಕೋಟಿ ಮಹಾನ್ ವ್ಯಕ್ತಿ ಯಾರು? ಇಷ್ಟು ಸಿಡಿ ಮಾಡಿಸಿದ ಪುಣ್ಯಾತ್ಮ ಯಾರು ಎಂದು ಪ್ರಶ್ನಿಸಿದ ಅವರು, ರಾಜಣ್ಣ ಯಾಕೆ ಸತಾಯಿಸುತ್ತಿದ್ದೀರಾ? ಬೇಗನೇ ದೂರು  ಕೊಡಿ ಎಂದರು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/BR3b3qhWZWaCzpD1m6N5uu

ಇತ್ತೀಚಿನ ಸುದ್ದಿ