“ಸಮಾಜದಲ್ಲಿ ಸಾಮರಸ್ಯ ಬಿತ್ತಿದ ಸರ್ವಜ್ಞ ಮತ್ತು ವೇಮನ ನೆನಪಿಸಿಕೊಳ್ಳಬೇಕು”

ಕರ್ನಾಟಕ ಸಾಹಿತ್ಯ ಅಕಾಡೆಮಿ ಮತ್ತು ಚಕೋರ ಸಾಹಿತ್ಯ ವೇದಿಕೆ ಸಹಯೋಗದಲ್ಲಿ ಮಲ್ಲಸಂದ್ರದ ಕುವೆಂಪು ಪ್ರಥಮ ದರ್ಜೆ ಕಾಲೇಜಿನಲ್ಲಿ “ಸರ್ವಜ್ಞ ಮತ್ತು ವೇಮನ ತೌಲನಿಕ ಚಿಂತನೆ”. ಉಪನ್ಯಾಸವನ್ನು ಏರ್ಪಡಿಸಲಾಗಿತ್ತು.
ಎಂ.ಸಿದ್ಧಾನಂದ ರವರು ಮಾತನಾಡುತ್ತಾ, ಸರ್ವಜ್ಞ ಜಾತಿ ಪದ್ಧತಿ ವಿರೋಧಿಸಿದ್ದನು. ಇಂದು ಆ ಜಾತಿ ಪದ್ಧತಿಯೇ ದೇಶಕ್ಕೆ ವೈರಿಯಾಗಿ ಕಾಡುತ್ತಿದೆ. ತಂದೆ ತಾಯಿ ಗುರು ಹಿರಿಯರಿಗೆ ನಮಿಸಿದರೆ, ಕೈಲಾಸ ಕರತಲಾಮಲಕ ಎಂದು ಸರ್ವಜ್ಞ ತ್ರಿಪದಿಯಲ್ಲಿ ತಿಳಿಸಿದ್ದಾನೆ ಹಾಗೂ ವೇಮನ ಕೂಡ ಅದೇ ರೀತಿಯ ತ್ರಿಪದಿಗಳನ್ನೆ ರಚಿಸಿ ಕವಿಗಳಲ್ಲಿ ಶ್ರೇಷ್ಠರೆನಿಸಿದ್ದಾರೆ ಎಂದರು.
ನಮ್ಮ ದೇಶದ ಸಂಸ್ಕೃತಿಯಿಂದ ನಾವು ಹೆಮ್ಮೆ ಪಡಬೇಕು, ವಿದ್ಯಾರ್ಥಿಗಳು ಅಹಿಂಸಾ ಪ್ರತಿಪಾದನೆ, ನೈತಿಕತೆಯನ್ನು ಬೆಳೆಸಿಕೊಳಬೇಕು. ಸಮಾಜ ಮಾನವನ ವಿಕಾಸಕ್ಕೆ ಪ್ರಯೋಗ ಶಾಲೆ, ಎಂದು ತಿಳಿಸಿದರು.
ಪ್ರಾಸ್ತಾವಿಕ ನುಡಿಯನ್ನು ಚಕೋರ ದ ಸಂಚಾಲಕ ಲಕ್ಷೀ ಶ್ರೀನಿವಾಸರವರು ಮಾತನಾಡುತ್ತಾ, ಕಾಲೇಜಿನಲ್ಲಿ ಕಾರ್ಯಕ್ರಮಕ್ಕೆ ಅವಕಾಶ ಕಲ್ಪಿಸಿ ಕೊಟ್ಟಿದ್ದಕ್ಕಾಗಿ ಕೃತಜ್ಞತೆ ಸಲ್ಲಿಸಿದರು.
ಕಾಲೇಜಿನ ಅಧ್ಯಕ್ಷರಾದ ಎನ್.ಕೃಷ್ಣಪ್ಪ, ಉಪಾಧ್ಯಕ್ಷರಾದ ಭರತ್ ಗುಂಡಪ್ಪ, ಕಾಲೇಜಿನ ಪ್ರಾಂಶುಪಾಲರಾದ ಎಂ.ಜಿ.ಕೃಷ್ಣಮೂರ್ತಿ, ರಾಜ್ಯ ಸಾಹಿತ್ಯ ಅಕಾಡೆಮಿ ಸದಸ್ಯರಾದ ಡಾ.ಕಾ.ವೆಂ.ಶ್ರೀನಿವಾಸಮೂರ್ತಿ, ಮೇಜರ್ ಮಲ್ಲಿಕಾರ್ಜುನ ಸ್ವಾಮಿ ಉಪಸ್ಥಿತರಿದ್ದರು. ಉಪನ್ಯಾಸಕರಾದ ಭೋಜೆಗೌಡ ನಿರೂಪಣೆ ಮಾಡಿದರು, ಬಿ.ಕೆ.ಕಿರಣ್ ಸ್ವಾಗತಿಸಿದರು.
ವರದಿ: ಉದಂತ ಶಿವಕುಮಾರ
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/HEkqDgrW2BlJLad5kZ1DX7