ಅಲರ್ಟ್: ಚೀನಾ ಎಚ್9ಎನ್2 ಭೀತಿ ಹಿನ್ನೆಲೆ: ಕೇರಳದಲ್ಲಿ ಎಚ್ಚರಿಕೆ ಕ್ರಮ ಎಂದ ಆರೋಗ್ಯ ಸಚಿವೆ ವೀಣಾ

ಉತ್ತರ ಚೀನಾದಲ್ಲಿ ಎಚ್ 9 ಎನ್ 2 (ಏವಿಯನ್ ಇನ್ ಫ್ಲುಯೆಂಝಾ ವೈರಸ್) ಪ್ರಕರಣಗಳು ಮತ್ತು ಮಕ್ಕಳಲ್ಲಿ ಉಸಿರಾಟದ ಕಾಯಿಲೆಯ ಲಕ್ಷಣಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಈ ಕುರಿತು ಪ್ರತಿಕ್ರಿಯೆ ನೀಡಿರುವ ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್, ತಮ್ಮ ತಂಡವು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ರಾಜ್ಯದ ತಜ್ಞರು ಮತ್ತು ವೈದ್ಯರೊಂದಿಗಿನ ಸಭೆಯ ಅಧ್ಯಕ್ಷತೆ ವಹಿಸಿ ಚರ್ಚೆ ಮಾಡಿದ್ದೀನಿ ಅಂದರು.
“ಈ ಕುರಿತು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ) ನಿನ್ನೆ ಚೀನಾದೊಂದಿಗೆ ಚರ್ಚಿಸಿದೆ. ಮಕ್ಕಳಲ್ಲಿ ಕಂಡುಬರುವ ನ್ಯುಮೋನಿಯಾದ ಬಗ್ಗೆ ಡಬ್ಲ್ಯುಎಚ್ಒ ಚೀನಾದೊಂದಿಗೆ ಚರ್ಚಿಸಿದೆ. ಚಿಂತಿಸಲು ಏನೂ ಇಲ್ಲ ಎಂದು ಚೀನಾ ಸ್ಪಷ್ಟಪಡಿಸಿದೆ ಎಂದು ನಮಗೆ ತಿಳಿದಿದೆ. ನಮ್ಮ ತಜ್ಞರ ಸಮಿತಿಯು ಪರಿಸ್ಥಿತಿಯನ್ನು ವಿಶ್ಲೇಷಿಸಲು ಸಭೆ ಸೇರಿತು. ನಿನ್ನೆ ನಾನು ವೈದ್ಯರೊಂದಿಗೆ ಸಭೆ ನಡೆಸಿದ್ದೇನೆ” ಎಂದು ಜಾರ್ಜ್ ಹೇಳಿದರು.
“ಕೋವಿಡ್ ಸಮಯದಲ್ಲಿ ಅವರು ದೀರ್ಘಕಾಲದವರೆಗೆ ಲಾಕ್ಡೌನ್ ಮಾಡಿದ್ದರು. ಲಾಕ್ಡೌನ್ ನಂತರ ಚೀನಾ ಕೇವಲ ಒಂದು ವರ್ಷದ ನಂತರ ಸಡಿಲಿಕೆಗಳನ್ನು ನೀಡಿತು. ಸಾಂಕ್ರಾಮಿಕ ರೋಗದಿಂದಾಗಿ ಮಕ್ಕಳಲ್ಲಿ ನೈಸರ್ಗಿಕ ರೋಗನಿರೋಧಕ ಶಕ್ತಿಯು ಕಡಿಮೆಯಾಗಿದೆ ಎಂದು ಈಗಾಗಲೇ ಜಾಗತಿಕವಾಗಿ ಕಂಡುಬಂದಿದೆ” ಎಂದು ಅವರು ಹೇಳಿದರು.