10ನೇ ತರಗತಿ ಬೋರ್ಡ್ ಪರೀಕ್ಷೆಯಲ್ಲಿ ರ‌್ಯಾಂಕ್ ಗಳಿಸಿದ ವಿದ್ಯಾರ್ಥಿನಿಯ ಬಗ್ಗೆ ಟ್ರೋಲ್: ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರ ಆಕ್ರೋಶ - Mahanayaka

10ನೇ ತರಗತಿ ಬೋರ್ಡ್ ಪರೀಕ್ಷೆಯಲ್ಲಿ ರ‌್ಯಾಂಕ್ ಗಳಿಸಿದ ವಿದ್ಯಾರ್ಥಿನಿಯ ಬಗ್ಗೆ ಟ್ರೋಲ್: ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರ ಆಕ್ರೋಶ

22/04/2024

ಉತ್ತರ ಪ್ರದೇಶದ ಸೀತಾಪುರದ ಪ್ರಾಚಿ ನಿಗಮ್ ಎಂಬ ಹದಿಹರೆಯದ ಬಾಲಕಿ 10ನೇ ತರಗತಿ ಬೋರ್ಡ್ ಪರೀಕ್ಷೆಯಲ್ಲಿ ಶೇಕಡಾ 98.5 ರಷ್ಟು ಅಸಾಧಾರಣ ಅಂಕಗಳೊಂದಿಗೆ ಅಗ್ರ ರ‌್ಯಾಂಕ್ ಗಳಿಸಿದ್ದಾಳೆ. ಆದ್ರೆ ಅವಳ ಸಾಧನೆಯನ್ನು ಅವಳ ನೋಟವನ್ನು ಗುರಿಯಾಗಿಸಿಕೊಂಡು ತೀರಾ ಕೆಟ್ಟದಾಗಿ ಆನ್ ಲೈನ್ ಟ್ರೋಲಿಂಗ್ ಮಾಡಲಾಗ್ತಿದೆ.

ಮುಖದಲ್ಲಿ ಕೂದಲನ್ನು ಹೊಂದಿದ ಹಿನ್ನೆಲೆಯಲ್ಲಿ ಪ್ರಾಚಿ ನಿಗಮ್ ರನ್ನು ಅಶ್ಲೀಲವಾಗಿ ಟೀಕೆ ಮಾಡಲಾಗುತ್ತಿದೆ. ಕೆಲವು ಟ್ರೋಲ್ ಗಳು ತೀರಾ ಕೆಟ್ಟದಾಗಿದೆ.

ಹಲವಾರು ಮಂದಿ ಸಾಮಾಜಿಕ ಮಾಧ್ಯಮ ಬಳಕೆದಾರರು ಪ್ರಾಚಿ ನಿಗಮ್ ಅವರ ರಕ್ಷಣೆಗೆ ಧಾವಿಸಿದ್ದಾರೆ. ಟ್ರೋಲ್ ಗಳನ್ನು ಖಂಡಿಸಿ ಯುವತಿಯರ ಮೇಲೆ ಆಗುತ್ತಿರುವ ಮಾನಸಿಕ ದೌರ್ಜನ್ಯವನ್ನು ಖಂಡಿಸಲಾಗುತ್ತಿದೆ.

ಅನೇಕರು ಇಂತಹ ನಕಾರಾತ್ಮಕತೆಯ ದಾಳಿಯ ಬಗ್ಗೆ ಅನೇಕರು ಕಳವಳ ವ್ಯಕ್ತಪಡಿಸಿದ್ದಾರೆ. ಋತುಸ್ರಾವದ ವಯಸ್ಸಿನ ಬಾಲಕಿಯ ಮೇಲೆ ಪರಿಣಾಮ ಬೀರುವ ಸಾಮಾನ್ಯ ಹಾರ್ಮೋನುಗಳ ಸ್ಥಿತಿಯಾದ ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ (ಪಿಸಿಒಎಸ್) ನಿಂದ ಮುಖದ ಕೂದಲು ಉಂಟಾಗಬಹುದು ಎಂದು ವೈದ್ಯರು ಹೇಳಿದ್ದಾರೆ.

ಪ್ರಾಚಿ ನಿಗಮ್ ಗೆ ಭಾರಿ ಬೆಂಬಲದೊಂದಿಗೆ ಬಲವಾದ ರಕ್ಷಣೆ ದೊರೆತಿದೆ. ಎಕ್ಸ್ ಬಳಕೆದಾರರು ಟ್ರೋಲ್‌ಗಳಿಗೆ ಸವಾಲು ಹಾಕಿದ್ದಾರೆ. ಬಾಲಕಿಯ ಶೈಕ್ಷಣಿಕ ಪ್ರತಿಭೆಯು ಮುಖ್ಯ. ಅವರ ನೋಟವಲ್ಲ ಎಂದು ಕೆಲವರು ಟ್ರೋಲ್ ಗಳಿಗೆ ಸವಾಲು ಹಾಕಿದ್ದಾರೆ.

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ