ಭೋರ್ಗರೆದು ಹರಿಯುವ ಕಾವೇರಿ ನದಿಯನ್ನು ದಾಟಿದ 19ಕ್ಕೂ ಹೆಚ್ಚು ಆನೆಗಳು - Mahanayaka

ಭೋರ್ಗರೆದು ಹರಿಯುವ ಕಾವೇರಿ ನದಿಯನ್ನು ದಾಟಿದ 19ಕ್ಕೂ ಹೆಚ್ಚು ಆನೆಗಳು

elephant
21/11/2023


Provided by

ಚಾಮರಾಜನಗರ: ಭೋರ್ಗರೆದು ಹರಿಯುವ ಕಾವೇರಿ ನದಿಯನ್ನು ಬರೋಬ್ಬರಿ 19 ಕ್ಕೂ ಅಧಿಕ ಆನೆಗಳು ದಾಟಿರುವ ವೀಡಿಯೋ ಒಂದನ್ನು ಯುವಕ ಸೆರೆ ಹಿಡಿದಿದ್ದು ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಹನೂರು ತಾಲೂಕಿನ ಗಡಿಯಲ್ಲಿರುವ ಹೊಗೆನಕಲ್ ಜಲಪಾತದಲ್ಲಿ ಈ ಘಟನೆ ನಡೆದಿದೆ. 3 ಮರಿಗಳು ಸೇರಿದಂತೆ 19 ಕ್ಕೂ ಹೆಚ್ಚು ಆನೆಗಳು ಕಾವೇರಿ ದಂಡೆಯನ್ನು ದಾಟಿ ಅಲ್ಲೇ ಓಡಾಡಿ ದಣಿವು ತಣಿಸಿಕೊಳ್ಳುತ್ತಾ ಮೇವು ಮೆಲ್ಲುತ್ತಾ ರಿಲಾಕ್ಸ್ ನಲ್ಲಿರುವ ವೀಡಿಯೋವನ್ನು ಗೋಪಿನಾಥಂ ಯುವಕ ಸೆರೆ ಹಿಡಿದಿದ್ದಾನೆ.

ಅರಣ್ಯ ಪ್ರದೇಶದಲ್ಲಿ ಭಾಗದಲ್ಲಿ ನೀರಿನ ಕೊರತೆ ಇರುವುದರಿಂದ ಒಂದು ನದಿ ಭಾಗದಲ್ಲಿ ಬಂದು ಬೀಡು ಬಿಡಲಿದ್ದು ಸದ್ಯ 19ಕ್ಕೂ ಅಧಿಕ ಆನೆಗಳ ಗುಂಪು ಕಾವೇರಿ ದಂಡೆಯಲ್ಲಿ ವಿಹರಿಸುತ್ತಿವೆ.

ಇತ್ತೀಚಿನ ಸುದ್ದಿ