ದೆಹಲಿಯಲ್ಲಿ ತಾಯಿ, ಮಗಳ ಮೇಲೆ ಗುಂಡಿನ ದಾಳಿ: ಕೃತ್ಯದ ಹಿಂದೆ ಆಸ್ತಿ ವಿವಾದದ ಶಂಕೆ

13/11/2023
ದೆಹಲಿಯ ಹೊರವಲಯದಲ್ಲಿರುವ ಖೇಡಾ ಗ್ರಾಮದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ತಾಯಿ ಮತ್ತು ಮಗಳು ಗಂಭೀರವಾಗಿ ಗಾಯಗೊಂಡಿದ್ದಾರೆ. ಸ್ಥಳೀಯ ಪ್ರಾರ್ಥನಾ ಸ್ಥಳದಲ್ಲಿ ಪ್ರಾರ್ಥನೆ ಸಲ್ಲಿಸಲು ಬಂದಿದ್ದ ಸಂತ್ರಸ್ತರನ್ನು ಅಪರಿಚಿತ ದಾಳಿಕೋರರು ಅನೇಕ ಬಾರಿ ಗುಂಡು ಹಾರಿಸಿದ್ದಾರೆ.
ಅವರನ್ನು ತಕ್ಷಣ ಸಫ್ದರ್ ಜಂಗ್ ಆಸ್ಪತ್ರೆಗೆ ದಾಖಲಿಸಲಾಯಿತು. ಇಲ್ಲಿ ಇವರಿಗೆ ಸದ್ಯ ಚಿಕಿತ್ಸೆ ನೀಡಲಾಗುತ್ತಿದೆ. ಅವರ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗಿದೆ.
ಪೊಲೀಸರ ಪ್ರಾಥಮಿಕ ವರದಿಗಳ ಪ್ರಕಾರ, ದಾಳಿಯ ಹಿಂದಿನ ಉದ್ದೇಶವು ಆಸ್ತಿ ವಿವಾದಕ್ಕೆ ಸಂಬಂಧಿಸಿದೆ ಎಂದು ತೋರುತ್ತದೆ. ಈ ಕುರಿತು ತನಿಖೆ ನಡೆಯುತ್ತಿದೆ.