ಮಕ್ಕಳಾಗಿಲ್ಲ ಎಂದು ಸೊಸೆಯನ್ನು ಮನೆಯಿಂದ ಹೊರಗಿಟ್ಟ ಅತ್ತೆ: ಮನೆಯ ಮುಂದೆ ಸೊಸೆಯಿಂದ ಧರಣಿ - Mahanayaka

ಮಕ್ಕಳಾಗಿಲ್ಲ ಎಂದು ಸೊಸೆಯನ್ನು ಮನೆಯಿಂದ ಹೊರಗಿಟ್ಟ ಅತ್ತೆ: ಮನೆಯ ಮುಂದೆ ಸೊಸೆಯಿಂದ ಧರಣಿ

chikaballapura
18/09/2023


Provided by

ಚಿಕ್ಕಬಳ್ಳಾಪುರ: ಮಕ್ಕಳಾಗಿಲ್ಲ ಎಂಬ ಕಾರಣಕ್ಕೆ ಅತ್ತೆಯೋರ್ವಳು ಸೊಸೆಯನ್ನು ಮನೆಯಿಂದ ಹೊರಗಿಟ್ಟ ಅಮಾನವೀಯ ಘಟನೆ ಚಿಕ್ಕಬಳ್ಳಾಪುರ ನಗರದ ಮುನ್ಸಿಪಲ್ ಬಡಾವಣೆಯಲ್ಲಿ ನಡೆದಿದೆ.

ಅತ್ತೆಯ ಕೃತ್ಯಕ್ಕೆ ಆಕೆಯ ಮಗನೂ ಸಾಥ್ ನೀಡಿದ್ದಾನೆ. ಇದರಿಂದ ನೊಂದ ಸೊಸೆ ತನ್ನ ಗಂಡನ ಮನೆಯ ಮುಂದೆ ಒಬ್ಬಂಟಿಯಾಗಿ ಧರಣಿ ನಡೆಸಿದ್ದು, ಅತ್ತೆ ಗಂಡನ ಜೊತೆಗೆ ಇರೋದಾಗಿ ಪಟ್ಟು ಹಿಡಿದಿದ್ದಾಳೆ.

ಮುಖ್ತಾರ್ ಅಹ್ಮದ್ ಮತ್ತು ಜವೀನ್ತಾಜ್ ಮದುವೆಯಾಗಿದ್ದು, ಇವರಿಗೆ ಮಕ್ಕಳಾಗಿಲ್ಲ. ಇದಕ್ಕೆ ಸೊಸೆಯೇ ಕಾರಣ ಎಂದು ಅತ್ತೆ ನ್ಯಾಮತ್ ಬೇಗಂ ಸೊಸೆಯನ್ನು ಮನೆಯಿಂದ ಹೊರಗಿಟ್ಟಿದ್ದಾಳೆ. ಹೀಗಾಗಿ ಪತ್ನಿಯನ್ನು ಬಾಡಿಗೆ ಮನೆಯಲ್ಲಿರಿಸಿದ ಮುಖ್ತಾರ್ ಅಹ್ಮದ್ ತಾನು ತಾಯಿಯ ಜೊತೆಗೆ ವಾಸಿಸಲು ಆರಂಭಿಸಿದ್ದ.

ಗಂಡ ಮತ್ತು ಅತ್ತೆ ವ್ಯವಸ್ಥಿತವಾಗಿ ತನ್ನನ್ನು ಹೊರಗಿಡುತ್ತಿರುವುದು ತಿಳಿಯುತ್ತಿದ್ದಂತೆಯೇ ಎಚ್ಚೆತ್ತುಕೊಂಡ ಜಬೀನ್ತಾಜ್, ತಾನು ಅತ್ತೆ ಹಾಗೂ ಗಂಡನ ಜೊತೆಗೆ ಇರುವುದಾಗಿ ಪಟ್ಟು ಹಿಡಿದು, ಮನೆಯ ಮುಂದೆ ಧರಣಿ ನಡೆಸುತ್ತಿದ್ದಾರೆ.ಸದ್ಯ ಸ್ಥಳಕ್ಕೆ ಆಗಮಿಸಿರುವ ಚಿಕ್ಕಬಳ್ಳಾಪುರ ಮಹಿಳಾ ಠಾಣೆ ಪೊಲೀಸರು ಕಾನೂನು ಕ್ರಮ ಕೈಗೊಂಡಿದ್ದಾರೆ.

ಇತ್ತೀಚಿನ ಸುದ್ದಿ