ರೈಲು ಪ್ರಯಾಣಿಕನ ಹತ್ರ ಇತ್ತು ಪಟಾಕಿ ಬಾಕ್ಸ್: ಇದ್ದಕ್ಕಿದ್ದಂತೆ ಪಟಾಕಿ ಬ್ಲಾಸ್ಟ್ ಆಗಿ ರೈಲಲ್ಲಿ ಬೆಂಕಿ! - Mahanayaka

ರೈಲು ಪ್ರಯಾಣಿಕನ ಹತ್ರ ಇತ್ತು ಪಟಾಕಿ ಬಾಕ್ಸ್: ಇದ್ದಕ್ಕಿದ್ದಂತೆ ಪಟಾಕಿ ಬ್ಲಾಸ್ಟ್ ಆಗಿ ರೈಲಲ್ಲಿ ಬೆಂಕಿ!

29/10/2024

ಪ್ರಯಾಣಿಕರೊಬ್ಬರು ಹೊತ್ತೊಯ್ಯುತ್ತಿದ್ದ ಪಟಾಕಿ ಸ್ಫೋಟಗೊಂಡು ಹರಿಯಾಣದ ರೋಹ್ಟಕ್ ಬಳಿ ಚಲಿಸುತ್ತಿದ್ದ ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ರೈಲ್ವೇ ಅಧಿಕಾರಿಗಳು ತಿಳಿಸಿದ್ದಾರೆ. ಈ ಘಟನೆಯಲ್ಲಿ ಕೆಲವು ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ.


Provided by

ಈ ರೈಲು ಜಿಂದ್ ನಿಂದ ಸಾಂಪಲಾ ಮತ್ತು ಬಹದ್ದೂರ್ ಗಢದ ಮೂಲಕ ದೆಹಲಿಗೆ ಹೋಗುತ್ತಿತ್ತು.
ರೈಲಿನ ಒಂದು ಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಶೀಘ್ರದಲ್ಲೇ ಅದು ಹೊಗೆಯಿಂದ ಆವೃತವಾಗಿತ್ತು ಎಂದು ಸರ್ಕಾರಿ ರೈಲ್ವೆ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

“ಪ್ರಾಥಮಿಕ ಮಾಹಿತಿಯ ಪ್ರಕಾರ, ರೈಲಿನ ವಿದ್ಯುತ್ ಉಪಕರಣದಲ್ಲಿ ಶಾರ್ಟ್ ಸರ್ಕ್ಯೂಟ್ ಉಂಟಾಗಿದೆ ಎಂದು ಶಂಕಿಸಲಾಗಿತ್ತು. ನಂತರ ಪ್ರಯಾಣಿಕರೊಬ್ಬರು ಹೊತ್ತೊಯ್ಯುತ್ತಿದ್ದ ಕೆಲವು ಪಟಾಕಿಗಳು ಸ್ಫೋಟಗೊಂಡ ಪರಿಣಾಮ ಬೆಂಕಿ ಅವಘಡ ಸಂಭವಿಸಿದೆ” ಎಂದು ಅಧಿಕಾರಿ ಬಹದ್ದೂರ್ ಗಢದಿಂದ ದೂರವಾಣಿ ಕರೆಯಲ್ಲಿ ತಿಳಿಸಿದ್ದಾರೆ.

ಘಟನೆಯಲ್ಲಿ ಇಬ್ಬರಿಂದ ಮೂವರು ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಅವರು ಹೇಳಿದರು.
ಸ್ಥಳವನ್ನು ಪರಿಶೀಲಿಸಲು ವಿಧಿವಿಜ್ಞಾನ ತಜ್ಞರನ್ನು ಕರೆಸಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ