ಎಲೆಕ್ಷನ್ ಫೈಟ್: ಮಧ್ಯಪ್ರದೇಶದಲ್ಲಿ 71.16%, ಛತ್ತೀಸ್ ಗಢದಲ್ಲಿ 68.15% ಮತದಾನ - Mahanayaka

ಎಲೆಕ್ಷನ್ ಫೈಟ್: ಮಧ್ಯಪ್ರದೇಶದಲ್ಲಿ 71.16%, ಛತ್ತೀಸ್ ಗಢದಲ್ಲಿ 68.15% ಮತದಾನ

17/11/2023

ಮಧ್ಯಪ್ರದೇಶದಲ್ಲಿ ಶೇ.71.16 ಮತ್ತು ಛತ್ತೀಸ್ ಗಢದಲ್ಲಿ ನಡೆದ ಎರಡನೇ ಹಂತದ ಚುನಾವಣೆಯಲ್ಲಿ ಶೇ.68.15ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿವೆ. ಮಧ್ಯಪ್ರದೇಶದ ಎಲ್ಲಾ 230 ವಿಧಾನಸಭಾ ಸ್ಥಾನಗಳಿಗೆ ಶುಕ್ರವಾರ ನಡೆದ ಚುನಾವಣೆಯಲ್ಲಿ ಮಧ್ಯಾಹ್ನ 3 ಗಂಟೆಯವರೆಗೆ ಶೇಕಡಾ 60.52 ರಷ್ಟು ಮತದಾನವಾಗಿದೆ. ಮಧ್ಯಾಹ್ನ 1 ಗಂಟೆಯವರೆಗೆ ರಾಜ್ಯದಲ್ಲಿ ಶೇ.45.40ರಷ್ಟು ಮತದಾನವಾಗಿತ್ತು. ಮಧ್ಯಪ್ರದೇಶದ 230 ವಿಧಾನಸಭಾ ಸ್ಥಾನಗಳಿಗೆ ಶುಕ್ರವಾರ ಬೆಳಿಗ್ಗೆ 7 ಗಂಟೆಗೆ ಮತದಾನ ಪ್ರಾರಂಭವಾಯಿತು. ಈ ಚುನಾವಣೆ 2,500 ಕ್ಕೂ ಹೆಚ್ಚು ಅಭ್ಯರ್ಥಿಗಳ ಚುನಾವಣಾ ಭವಿಷ್ಯವನ್ನು ನಿರ್ಧರಿಸಲಿದೆ.


Provided by

ಛತ್ತೀಸ್ ಗಢದಲ್ಲಿ ಮಧ್ಯಾಹ್ನ 3 ಗಂಟೆಯವರೆಗೆ ಎರಡನೇ ಹಂತದ ಮತದಾನದಲ್ಲಿ ಶೇ.55.31ರಷ್ಟು ಮತದಾನವಾಗಿದೆ. ಛತ್ತೀಸ್ ಗಢದಲ್ಲಿ ಮಧ್ಯಾಹ್ನ 1 ಗಂಟೆಯವರೆಗೆ ಶೇ.38.22ರಷ್ಟು ಮತದಾನವಾಗಿತ್ತು. ಛತ್ತೀಸ್ ಗಢದಲ್ಲಿ 90 ಸ್ಥಾನಗಳಿದ್ದು, 20 ಕ್ಷೇತ್ರಗಳಿಗೆ ನವೆಂಬರ್ 7ರಂದು ಮೊದಲ ಹಂತದಲ್ಲಿ ಚುನಾವಣೆ ನಡೆದಿತ್ತು.

ಎರಡು ರಾಜ್ಯಗಳು ಆಡಳಿತಾರೂಢ ಭಾರತೀಯ ಜನತಾ ಪಕ್ಷ ಮತ್ತು ಪ್ರತಿಪಕ್ಷ ಕಾಂಗ್ರೆಸ್ ನಡುವೆ ತೀವ್ರ ಸ್ಪರ್ಧೆಗೆ ಸಾಕ್ಷಿಯಾಗಿವೆ. ಪ್ರಧಾನಿ ನರೇಂದ್ರ ಮೋದಿಯವರ ಜನಪ್ರಿಯತೆ ಮತ್ತು ಪಕ್ಷದ ಸಾಮೂಹಿಕ ನಾಯಕತ್ವವನ್ನು ಅವಲಂಬಿಸಿ ಬಿಜೆಪಿ ಯಾವುದೇ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸಿಲ್ಲ. ಮತ್ತೊಂದೆಡೆ, ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಕಮಲ್ ನಾಥ್ ಅವರನ್ನು ಉನ್ನತ ಹುದ್ದೆಗೆ ತನ್ನ ಮುಖವಾಗಿ ಬಿಂಬಿಸಿದೆ.

ಇತ್ತೀಚಿನ ಸುದ್ದಿ