ಮಂಡ್ಯ ಬಿಟ್ಟುಕೊಟ್ಟು, ಕಮಲ ಮುಡಿದ ಸಂಸದೆ ಸುಮಲತಾ ಅಂಬರೀಶ್! - Mahanayaka
4:32 AM Thursday 11 - September 2025

ಮಂಡ್ಯ ಬಿಟ್ಟುಕೊಟ್ಟು, ಕಮಲ ಮುಡಿದ ಸಂಸದೆ ಸುಮಲತಾ ಅಂಬರೀಶ್!

sumalatha
05/04/2024

ಬೆಂಗಳೂರು: ಮಂಡ್ಯ ಪಕ್ಷೇತರ ಸಂಸದೆ ಸುಮಲತಾ ಅಂಬರೀಶ್ ಇಂದು BJP ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮಾಜಿ ಸಿಎಂ ಯಡಿಯೂರಪ್ಪ, ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಸಮ್ಮುಖದಲ್ಲಿ ಅಧಿಕೃತವಾಗಿ BJP ಸೇರ್ಪಡೆಯಾಗಿದ್ದಾರೆ.


Provided by

ಮೈಸೂರು ಭಾಗದಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಸುಮಲತಾ ಪ್ರಚಾರಕ್ಕೆ ಇಳಿಯಲಿದ್ದು, ಸುಮಲತಾರನ್ನು ಸ್ಟಾರ್ ಕ್ಯಾಂಪೇನರ್ ಮಾಡಿ ಪ್ರಚಾರ ಮಾಡಲು ಬಿಜೆಪಿ ಸಿದ್ಧತೆ ನಡೆಸಿದೆ ಎನ್ನಲಾಗಿದೆ.

ಮಂಡ್ಯ ಬಿಟ್ಟು ಕೊಡಲ್ಲ, ಅದು ನನ್ನ ಸ್ವಾಭಿಮಾನ ಎಂದಿದ್ದ ಸುಮಲತಾ ಬಳಿಕ ನಡೆದ ರಾಜಕೀಯ ವಿದ್ಯಮಾನಗಳಲ್ಲಿ ಮಂಡ್ಯ ಕ್ಷೇತ್ರವನ್ನು ಜೆಡಿಎಸ್ ಗೆ ಬಿಟ್ಟುಕೊಟ್ಟಿದ್ದಾರೆ.
ಬಿಜೆಪಿ ಸೇರ್ಪಡೆಯ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸುಮಲತಾ ಹಾಡಿ ಹೊಗಳಿದ್ದು, ನರೇಂದ್ರ ಮೋದಿಯವರು ಮೈಸೂರಿಗೆ ಬಂದಾಗ ಅವರೂ ನನ್ನ ಪರವಾಗಿ ಮತ ಕೊಡಿ ಎಂದು ಪ್ರಚಾರ ಮಾಡಿದ್ದನ್ನು ನಾನು ಮರೆಯೋದಿಲ್ಲ.

ಐದು ವರ್ಷಗಳ ಸಂಸದರಾಗಿ ಸಾಕಷ್ಟು ಕಲಿತಿದ್ದೇನೆ ಸಾಕಷ್ಟು ಅನುಭವ ಆಗಿದೆ. ಅಂಬರೀಶ್ ಕಾಂಗ್ರೆಸ್ ನಲ್ಲಿದ್ದವರು, ನಾನು ಸಂಸದಳಾಗಿದ್ದಾಗ ಬಿಜೆಪಿಯವರಿಂದ ಮಾರ್ಗದರ್ಶನ ಸಿಕ್ಕಿದೆ, ಇದೇ ನನಗೆ ಸ್ಪೂರ್ತಿ. ನರೇಂದ್ರ ಮೋದಿಯವರ ನಾಯಕತ್ವ ನೋಡಿ ನಾನು ಬಿಜೆಪಿ ಸೇರಿದರೆ ಒಳ್ಳೆಯದು ಅನ್ಸಿಸಿತು ಎಂದು ತಿಳಿಸಿದರು.

 

ಇತ್ತೀಚಿನ ಸುದ್ದಿ