ಸ್ಕೂಟಿಗೆ ಡಿಚ್ಚಿ ಹೊಡೆದ ಕೋಲೆ ಬಸವ: ಸ್ವಲ್ಪದರಲ್ಲೇ ಬಚಾವಾದ ಸವಾರ: ಬೆಚ್ಚಿಬೀಳಿಸುವಂತಿದೆ ವಿಡಿಯೋ - Mahanayaka

ಸ್ಕೂಟಿಗೆ ಡಿಚ್ಚಿ ಹೊಡೆದ ಕೋಲೆ ಬಸವ: ಸ್ವಲ್ಪದರಲ್ಲೇ ಬಚಾವಾದ ಸವಾರ: ಬೆಚ್ಚಿಬೀಳಿಸುವಂತಿದೆ ವಿಡಿಯೋ

banglore
05/04/2024

ಬೆಂಗಳೂರು: ರಸ್ತೆಯಲ್ಲಿ ಸಾಗುತ್ತಿದ್ದ ಸ್ಕೂಟಿಗೆ ಕೋಲೆ ಬಸವ ಡಿಚ್ಚಿ ಹೊಡೆದ ಘಟನೆ ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್ ನ ಸ್ವಿಮ್ಮಿಂಗ್ ಪೂಲ್ ಜಂಕ್ಷನ್ ನಲ್ಲಿ ನಡೆದಿದ್ದು, ಕ್ಯಾಂಟರ್ ಚಾಲಕನ ಸಮಯ ಪ್ರಜ್ಞೆಯಿಂದ ದ್ವಿಚಕ್ರ ವಾಹನ ಸವಾರನ ಪ್ರಾಣ ಉಳಿದಿದೆ.

ಸ್ಕೂಟರ್ ನಲ್ಲಿ ಸವಾರ ತನ್ನ ಪಾಡಿಗೆ ತಾನು ಸಾಗುತ್ತಿದ್ದ, ರಸ್ತೆ ಬದಿಯಲ್ಲಿ ಕೋಲೆ ಬಸವನನ್ನು ಹಿಡಿದುಕೊಂಡು ಮಹಿಳೆಯೊಬ್ಬರು ಬರುತ್ತಿತ್ತು. ಈ ವೇಳೆ ಏಕಾಏಕಿ ಸ್ಕೂಟರ್ ಗೆ ಕೋಲೆ ಬಸವ ಡಿಚ್ಚಿ ಹೊಡೆದಿದೆ. ಈ ವೇಳೆ ಮುಂಭಾಗದಿಂದ ಬರುತ್ತಿದ್ದ ಕ್ಯಾಂಟರ್ ನಡಿಗೆ ಸವಾರ ಬಿದ್ದಿದ್ದಾನೆ. ಆದರೆ ಕ್ಯಾಂಟರ್ ಚಾಲಕ ಚಾಕಚಕ್ಯತೆಯಿಂದ ವಾಹನ ನಿಲ್ಲಿಸಿ ದ್ವಿಚಕ್ರ ವಾಹನ ಸವಾರನ ಪ್ರಾಣ ಕಾಪಾಡಿದ್ದಾರೆ.

ಅಂದ ಹಾಗೆ ದ್ವಿಚಕ್ರ ವಾಹನ ಸವಾರ ಹೆಲ್ಮೆಟ್ ಕೂಡ ಧರಿಸಿರಲಿಲ್ಲ, ಕ್ಷಣ ಕಾಲ ಕ್ಯಾಂಟರ್ ಚಾಲಕ ಮೈಮರೆತಿದ್ದರೆ ಅನಾಹುತವೇ ನಡೆದಿರುತ್ತಿತ್ತು.


Provided by

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

 

ಇತ್ತೀಚಿನ ಸುದ್ದಿ