35 ವರ್ಷಗಳ ಹಿಂದಿನ ಬಿಲ್ ಪಾವತಿಸಿ, ಮಾನವೀಯತೆ ಮೆರೆದ ಮಹಮ್ಮದ್ - Mahanayaka

35 ವರ್ಷಗಳ ಹಿಂದಿನ ಬಿಲ್ ಪಾವತಿಸಿ, ಮಾನವೀಯತೆ ಮೆರೆದ ಮಹಮ್ಮದ್

mahammad
15/02/2025


Provided by

ಕೊಟ್ಟಿಗೆಹಾರದ ಪ್ರಸಿದ್ಧ ಭಾರತ್ ಹೋಟೆಲ್ ಮಾಲೀಕರಾದ ದಿವಂಗತ M. ಇಬ್ರಾಹಿಂ ಅವರಿಂದ 35 ವರ್ಷಗಳ ಹಿಂದೆ ಆಹಾರ ಸೇವಿಸಿ ಹಣ ನೀಡಲಾಗದೇ ಹೋದ ಮಂಗಳೂರಿನ ದೇರಳಕಟ್ಟೆಯ M. A. ಮಹಮ್ಮದ್, ಇಂದು ಅದೇ ಹೋಟೆಲಿಗೆ ಆಗಮಿಸಿ ತಮ್ಮ ಹಳೆಯ ಸಾಲವನ್ನು ತೀರಿಸಿದರು.

ಆ ಸಮಯದಲ್ಲಿ ಹೋಟೆಲ್‌ನಲ್ಲಿ ಕಡುಬು ಮತ್ತು ಮೀನು ಸಾರು ಸೇವಿಸಿದ ಮಹಮ್ಮದ್, ಆಪತ್ತಿನ ಸಂದರ್ಭದ ಕಾರಣ ಹಣವನ್ನು ಪಾವತಿಸದೇ ಹೋಟೆಲ್ ತೊರೆದಿದ್ದರು. ಆದರೆ, ಆ ಘಟನೆಯು ಅವರ ಮನಸ್ಸಿನಲ್ಲಿ ಉಳಿದುಕೊಂಡು, 35 ವರ್ಷಗಳ ಬಳಿಕ ಈ ಹಿಂದಿನ ಋಣ ತೀರಿಸುವ ಉದ್ದೇಶದಿಂದ ಕೊಟ್ಟಿಗೆಹಾರಕ್ಕೆ ಹಾಜರಾದರು.

ಮಹಮ್ಮದ್ ಅವರು ಇಬ್ರಾಹಿಂ ಅವರ ಪುತ್ರ ಅಜೀಜ್ ಅವರನ್ನು ಭೇಟಿ ಮಾಡಿ, 35 ವರ್ಷಗಳ ಹಿಂದಿನ ಹಣವನ್ನು ವಾಪಸು ನೀಡಿ, ತಾವು ಮಾಡಿದ್ದ ತಪ್ಪಿಗೆ ಕ್ಷಮೆ ಯಾಚಿಸಿದರು. ಈ ಘಟನೆ ಮಾನವೀಯತೆ, ನಿಷ್ಠೆ ಮತ್ತು ಋಣ ಸ್ಮರಣೆಯ ಸುಂದರ ಉದಾಹರಣೆಯಾಗಿದ್ದು, ಹೋಟೆಲ್ ಸಿಬ್ಬಂದಿ ಮತ್ತು ಸ್ಥಳೀಯರ ಮೆಚ್ಚುಗೆಗೆ ಪಾತ್ರವಾಗಿದೆ.

“ಆರ್ಥಿಕ ತೊಂದರೆಯ ಕಾರಣದಿಂದ ಈತನಿಗೂ ಮುನ್ನ ಇಂತಹಾ ಘಟನೆ ನಡೆದಿದೆ, ಆದರೆ ಅದನ್ನು ನೆನಪಿಟ್ಟುಕೊಂಡು 35 ವರ್ಷಗಳ ಬಳಿಕ ಪಾವತಿಸುವ ಈ ಪ್ರಾಮಾಣಿಕತೆ ಇಂದಿನ ಯುಗದಲ್ಲಿ ಅಪರೂಪ”, ಎಂದು ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದರು. ಈ ಘಟನೆಯು, ಮಾನವೀಯ ಮೌಲ್ಯಗಳ ಮಹತ್ವವನ್ನು ಮತ್ತೊಮ್ಮೆ ನೆನಪಿಸಿತು!


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/BR3b3qhWZWaCzpD1m6N5uu

ಇತ್ತೀಚಿನ ಸುದ್ದಿ