ಬಸ್ ಚಾಲಕನ ಆಚಾತುರ್ಯ ?:  ಅಪಘಾತಕ್ಕೆ ಯುವಕ ಬಲಿ:  ಇನ್ನೋರ್ವನ ಸ್ಥಿತಿ ಚಿಂತಾಜನಕ - Mahanayaka

ಬಸ್ ಚಾಲಕನ ಆಚಾತುರ್ಯ ?:  ಅಪಘಾತಕ್ಕೆ ಯುವಕ ಬಲಿ:  ಇನ್ನೋರ್ವನ ಸ್ಥಿತಿ ಚಿಂತಾಜನಕ

ksrtc
15/02/2025

ಕಾರಟಗಿ:  ತಾಲೂಕಿನ ಮರ್ಲಾನಹಳ್ಳಿಯ ರಾಜ್ಯ ಹೆದ್ದಾರಿಯಲ್ಲಿ ಭೀಕರ ಅಪಘಾತ ಸಂಭವಿಸಿದೆ. ಮರ್ಲಾನಹಳ್ಳಿಯ ಪೆಟ್ರೋಲ್ ಬಂಕ್ ಹತ್ತಿರದ ಹೆದ್ದಾರಿಯ ಮುಂಭಾಗದಲ್ಲಿ ಕೆಎಸ್ ಆರ್ಟಿಸಿ ಬಸ್  ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸಿದ್ದಾಪುರದ ಮಂಜುನಾಥ್  ಸ್ಥಳದಲ್ಲಿ ಮೃತಪಟ್ಟಿದ್ದಾರೆ.


Provided by

ಅಪಘಾತ ಘಟನೆ ವಿಚಾರ ತಿಳಿಯುತ್ತಿದ್ದಂತೆ ಕಾರಟಗಿ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದರು. ಇನ್ನೋರ್ವ ಬೈಕ್ ಸವಾರ  ಖಾಸಿಂಸಾಬ್ ಕಾರಟಗಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಚಿಕಿತ್ಸೆಗಾಗಿ ಕಳುಹಿಸಲಾಯಿತು. ಆದರೆ ಕಾರಟಗಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆಗೆ ಗಾಯಾಳು ಸ್ಪಂದಿಸದೆ ಇರುವುದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಗಂಗಾವತಿಗೆ ಕಳುಹಿಸಲಾಯಿತು. ಆದರೆ ಗಂಗಾವತಿಯಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಇರುವುದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಬಳ್ಳಾರಿಗೆ ಕಳುಹಿಸಲಾಗಿದೆ.

ಘಟನೆ ಸಂಬಂಧ ತು ಕಾರಟಗಿ ಪೊಲೀಸ್ ಠಾಣೆಯಲ್ಲಿ ಅಪಘಾತ ಪ್ರಕರಣ ದಾಖಲಾಗಿದ್ದು, ಅಧಿಕಾರಿಗಳು ಮೃತಪಟ್ಟ ವ್ಯಕ್ತಿಯ ಪೋಸ್ಟ್ ಮಾರ್ಟಮ್ ಮಾಡಿ ಮೃತ ದೇಹವನ್ನು ಕುಟುಂಬಗಳಿಗೆ ಒಪ್ಪಿಸಿದ್ದಾರೆ


Provided by

ಅಪಘಾತ ಹೇಗೆ ನಡೆಯಿತು ? :

ಕಾರಟಗಿ ಮಾರ್ಗವಾಗಿ ಗಂಗಾವತಿಗೆ ಹೊರಟಿದ್ದ  ಕೆಎಸ್ ಆರ್ಟಿಸಿ ಬಸ್ (ಕೆಎ ೩೬.ಎಫ್ ೧೪೪೯) ಶನಿವಾರ ಮಧ್ಯಾಹ್ನ 12: 45ರ ಸುಮಾರಿಗೆ ಕಾರಟಗಿ ಸರಹದ್ದು ವ್ಯಾಪ್ತಿಗೊಳಪಡುವ ಮರ್ಲಾನಹಳ್ಳಿಯ  ಪೆಟ್ರೋಲ್ ಬಂಕ್ ಪಶ್ಚಿಮ ದಿಕ್ಕಿಗೆ ಇರುವ ರಾಜ್ಯ ರಸ್ತೆಯ ಮೇಲೆ ಬಸ್ಸು ಚಲಿಸುತ್ತಿರುವ ಸಂದರ್ಭದಲ್ಲಿ ಮುಂದೆ ಹೋಗುತ್ತಿರುವ ಕಾರನ್ನು ಓವರ್ ಟೇಕ್ ಮಾಡಲು ಬಸ್ ಚಾಲಕ ಪ್ರಯತ್ನಿಸಿದ್ದಾನೆ.

ಓವರ್ಟೇಕ್ ಮಾಡಿದ ಸಂದರ್ಭದಲ್ಲಿ ಮರ್ಲಾ ನಹಳ್ಳಿಯಿಂದ ಕಾರಟಗಿಗೆ ಕೆಲಸದ ನಿಮಿತ್ತ ಬರುತ್ತಿರುವ ದ್ವಿಚಕ್ರ ವಾಹನಕ್ಕೆ (ಗಾಡಿ ನಂಬರ್ ಕೆಎ ೩೭, ಇಪಿ ೪೪೯೪ ) ಬಸ್ ಡಿಕ್ಕಿ ಹೊಡೆದಿದೆ.  ಬಸ್ ಚಾಲಕನ ಅಚಾತುರ್ಯದಿಂದ ಅಪಘಾತ ಸಂಭವಿಸಿದೆ ಎಂದು ಪ್ರತ್ಯಕ್ಷದರ್ಶಿಗಳ ಹೇಳಿಕೆಗಳಿಂದ ತಿಳಿದು ಬಂದಿದೆ.


ಇತ್ತೀಚಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಬಸ್ ಚಾಲಕರು  ನಗರದಲ್ಲಿ ಮತ್ತು ನಗರದ ಹೊರ ವಲಯದ ರಸ್ತೆಗಳ ಮೇಲೆಯೂ ಬಸ್ ಓವರ್ ಸ್ಪೀಡ್ ಮಾಡುವುದರ ಮೂಲಕ ಕರ್ತವ್ಯದಲ್ಲಿ ಅಚಾತುರ್ಯ ತೋರುತ್ತಿದ್ದಾರೆ. ಬಸ್ ಚಾಲಕರ ಅಚಾತುರ್ಯದಿಂದಾಗಿ ಅಪಘಾತಗಳು ಪ್ರಕರಣಗಳು ಹೆಚ್ಚುತ್ತಿದ್ದು,  ಮರ್ಲಾನಹಳ್ಳಿಯ ಅಪಘಾತಕ್ಕೆ ಬಸ್ ಚಾಲಕನ ಅಚಾತುರ್ಯ ಕಾರಣ. ರಾಜ್ಯ ರಸ್ತೆ ಸಾರಿಗೆ ಇಲಾಖೆ ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಗೆ ಹಾಗೂ ಗಾಯಾಳುಗೆ  ತಲಾ 20 ಲಕ್ಷ ರೂಪಾಯಿ ಪರಿಹಾರ ನೀಡಬೇಕು.

-ಶರಣಪ್ಪ ಸಂಗಟಿ

 ಯುವ ಘಟಕ, ರಾಜ್ಯ ಉಪಾಧ್ಯಕ್ಷರು, ನಮ್ಮ ನಾಡು ರಕ್ಷಣಾ ವೇದಿಕೆ (ರಿ)


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/BR3b3qhWZWaCzpD1m6N5uu

ಇತ್ತೀಚಿನ ಸುದ್ದಿ