ಬಣಕಲ್ ಬಾಲಿಕ ಮರಿಯ ಚರ್ಚ್ ವಾರ್ಷಿಕೋತ್ಸವ:  'ಮಾತೆ ಮರಿಯಮ್ಮನವರು ಭರವಸೆಯ ತಾಯಿ': ಫಾ.ಪೌಲ್ ಮೆಲ್ವಿನ್ ಡಿಸೋಜ - Mahanayaka

ಬಣಕಲ್ ಬಾಲಿಕ ಮರಿಯ ಚರ್ಚ್ ವಾರ್ಷಿಕೋತ್ಸವ:  ‘ಮಾತೆ ಮರಿಯಮ್ಮನವರು ಭರವಸೆಯ ತಾಯಿ’: ಫಾ.ಪೌಲ್ ಮೆಲ್ವಿನ್ ಡಿಸೋಜ

banakal balika maria church
14/02/2025


Provided by

Banakal Balika Maria Church Anniversary: ಕೊಟ್ಟಿಗೆಹಾರ: ಮಾತೆ ಮರಿಯಮ್ಮನವರು ಏಸುಕ್ರಿಸ್ತರ ಜನ್ಮದಾತೆಯಾಗಿ ಭರವಸೆಯ ತಾಯಿಯಾಗಿದ್ದಾರೆ ಎಂದು ಮೈಸೂರು ಬೋಗಾಧಿ ಚರ್ಚಿನ ನಿರ್ದೇಶಕರಾದ ಫಾ.ಪೌಲ್ ಮೆಲ್ವಿನ್ ಡಿಸೋಜ ಹೇಳಿದರು.


Provided by

ಬುಧವಾರ ಸಂಜೆ ಬಣಕಲ್ ಬಾಲಿಕ ಮರಿಯ ಚರ್ಚಿನ ವಾರ್ಷಿಕೋತ್ಸವದಲ್ಲಿ ಪ್ರಬೋಧನೆ ನೀಡಿ ಮಾತನಾಡಿದರು. ಮಾತೆ ಮರಿಯಮ್ಮನವರು ನಿಷ್ಕಳಂಕ ಮಾತೆಯಾಗಿ ಪ್ರಭು ಏಸುವಿಗೆ ಜನ್ಮ ನೀಡಿ ಕ್ರೈಸ್ತರಿಗೆ ಉನ್ನತ ತಾಯಿಯಾಗಿ ನಮಗೆ ಆದರ್ಶ ಮಾತೆಯಾಗಿದ್ದಾರೆ. ಧೀನತೆಯ ಪ್ರತಿರೂಪವಾಗಿ ಮಾತೆ ಮರಿಯಮ್ಮನವರು ದೇವರ ಚರಣದಾಸಿಯಾಗಿ ವಿಧೇಯರಾದರು. ಅವರ ಆದರ್ಶ ಗುಣಗಳು, ಮೌಲ್ಯಗಳನ್ನು ನಮ್ಮ ಜೀವನದಲ್ಲಿ  ಅಳವಡಿಸಿಕೊಂಡು ಉತ್ತಮ ನಾಗರೀಕರಾಗಿ ಬದುಕಬೇಕು. ನಮ್ಮ ಕುಟುಂಬದಲ್ಲಿ ಭರವಸೆ, ಪ್ರೀತಿ, ವಿಶ್ವಾಸಗಳು ಹೆಚ್ಚಿಸಿ ಕುಟುಂಬದಲ್ಲಿ  ಉತ್ತಮ ಬಾಂಧವ್ಯ ಬೆಳೆಸಿಕೊಳ್ಳಬೇಕು. ಏಸು ಕ್ರಿಸ್ತರ ದಾರಿಯಲ್ಲಿ ನಾವು ನಡೆದು ಪರಿವರ್ತನೆಯ ಜೀವನ ನಾವು ನಡೆಸಬೇಕು’ಎಂದರು.


Provided by

ಬಣಕಲ್ ಚರ್ಚ್ ಧರ್ಮಗುರು ಫಾ.ಪ್ರೇಮ್ ಲಾರೆನ್ಸ್ ಡಿಸೋಜ ಮಾತನಾಡಿ, ಅಮ್ಮನ ಮಮತೆಯ ಸಮಾನವಾದ ಆಭರಣವೂ ಯಾವುದೂ ಇಲ್ಲ. ಸರ್ವರಿಗೂ ಮಾತೆ ಮರಿಯಮ್ಮನವರ ಹೇರಳವಾದ ಕೃಪೆ ಕುಟುಂಬದಲ್ಲಿ ನೆಲೆಸಲಿ. ಚರ್ಚ್ ವಾರ್ಷಿಕೋತ್ಸವಕ್ಕೆ ನೆರವಾದ ಸರ್ವ ದಾನಿಗಳನ್ನು ಅವರ ಸಹಕಾರವನ್ನು ಸ್ಮರಿಸಿದರು. ಹಬ್ಬದ ಶುಭಾಶಯ ಕೋರಿದರು.

ಪೂಜೆಯ ಬಳಿಕ ಬಣಕಲ್ ಪಟ್ಟಣದಲ್ಲಿ ಮಾತೆ ಮರಿಯಮ್ಮನವರ ಸುಂದರ ತೇರುವಿನೊಂದಿಗೆ ಪರಮ ಪ್ರಸಾದದ ಪ್ರತಿಷ್ಠಾಪನೆ ಜತೆಗೆ ಕ್ರೈಸ್ತರು ಆಕರ್ಷಕ ಮೆರವಣಿಗೆ ನಡೆಸಿದರು. ಹಬ್ಬದ ಸಂಭ್ರಮದಲ್ಲಿ ಫಾ.ಆನಂದ್ ಕ್ಯಾಸ್ತಲಿನೊ,ಫಾ.ಥಾಮಸ್ ಕಲಘಟಗಿ, ಫಾ.ಡೇವಿಡ್ ಪ್ರಕಾಶ್, ಫಾ.ಎಡ್ವಿನ್ ರಾಕೇಶ್, ಫಾ.ಜೆ.ಬಿ.ಗೊನ್ಸಾಲ್ವಿಸ್, ಫಾ.ಡೆನಿಸ್ ಡಿಸೋಜ ಸೇರಿದಂತೆ ಚಿಕ್ಕಮಗಳೂರು ಧರ್ಮಕ್ಷೇತ್ರದ ವಿವಿಧ ಚರ್ಚಿನ ಇಪ್ಪತ್ತಕ್ಕೂ ಅಧಿಕ ಧರ್ಮಗುರುಗಳು ಭಾಗವಹಿಸಿದ್ದರು.

ಸಿಸ್ಟರ್ ಹಿಲ್ಡಾ ಲೋಬೋ,ಸಿಸ್ಟರ್ ಆಮಲ್ ರಾಣಿ ಸೇರಿದಂತೆ ವಿವಿಧ ಕ್ರೈಸ್ತ ಭಗಿನೀಯರು ಇದ್ದರು. ಬಣಕಲ್ ಕ್ರೈಸ್ತ ಅಭಿವೃದ್ದಿ ಸಂಘ, ಹರ್ಷ ಮೆಲ್ವಿನ್ ಲಸ್ರಾದೊ, ಐಸಿವೈಎಂ ಯುವ ಸಂಘಟನೆ, ಪೀಠ ಸೇವಕರು, ಸ್ತ್ರೀ ಸಂಘಟನೆಯವರು, ಸಂಗೀತ ವೃಂದದವರು ವಾರ್ಷಿಕೋತ್ಸವದ ಸಾಥ್ ವಹಿಸಿದ್ದರು.ಮಂಗಳೂರಿನ ಪಜೀರ್ ಬ್ಯಾಂಡ್ ಸಿಸ್ಟಮ್ ಮೆರವಣಿಗೆಯ ಅಂದ ಹೆಚ್ಚಿಸಿತು. ಬಳಿಕ ಸಹ ಭೋಜನ ಕೂಟ ನಡೆಯಿತು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/BR3b3qhWZWaCzpD1m6N5uu

ಇತ್ತೀಚಿನ ಸುದ್ದಿ