ಮತ್ತೆ ಸದ್ದು ಮಾಡಿದ ಮುಂಬೈ 26/11 ದಾಳಿ ಪ್ರಕರಣ: ಆರೋಪಿ ರಾಣಾ ಹಾಗೂ ಇತರರ ವಿರುದ್ಧ 5ನೇ ಚಾರ್ಜ್ ಶೀಟ್ ಸಲ್ಲಿಸಿದ ಮುಂಬೈ ಪೊಲೀಸರು - Mahanayaka
12:24 AM Thursday 21 - August 2025

ಮತ್ತೆ ಸದ್ದು ಮಾಡಿದ ಮುಂಬೈ 26/11 ದಾಳಿ ಪ್ರಕರಣ: ಆರೋಪಿ ರಾಣಾ ಹಾಗೂ ಇತರರ ವಿರುದ್ಧ 5ನೇ ಚಾರ್ಜ್ ಶೀಟ್ ಸಲ್ಲಿಸಿದ ಮುಂಬೈ ಪೊಲೀಸರು

25/09/2023


Provided by

2008 ರ 26/11 ಭಯೋತ್ಪಾದಕ ದಾಳಿ ಪ್ರಕರಣದಲ್ಲಿ ಮುಂಬೈ ಪೊಲೀಸರ ಅಪರಾಧ ವಿಭಾಗವು ಐದನೇ ಚಾರ್ಜ್ ಶೀಟ್ ಸಲ್ಲಿಸಿದೆ. ಮುಂಬೈ ಕ್ರೈಂ ಬ್ರಾಂಚ್ ಸಲ್ಲಿಸಿದ ಇತ್ತೀಚಿನ 405 ಪುಟಗಳ ದಾಖಲೆಯಲ್ಲಿ ಪಾಕಿಸ್ತಾನ ಮೂಲದ ಕೆನಡಾದ ಉದ್ಯಮಿ ತಹವೂರ್ ರಾಣಾ ಮತ್ತು ಇತರರನ್ನು ಅಧಿಕಾರಿಗಳು ಇದರಲ್ಲಿ ಹೆಸರಿಸಿದ್ದಾರೆ.

ತಹವೂರ್ ರಾಣಾ ಪಾಕಿಸ್ತಾನ ಮೂಲದ ಕೆನಡಾದಲ್ಲಿದ್ದ ವ್ಯಾಪಾರಿಯಾಗಿದ್ದಾನೆ. ಪ್ರಸ್ತುತ ಯುನೈಟೆಡ್ ಸ್ಟೇಟ್ಸ್ ನಲ್ಲಿ ಬಂಧನದಲ್ಲಿದ್ದಾರೆ. 26/11 ಭಯೋತ್ಪಾದಕ ದಾಳಿಯ ಮಾಸ್ಟರ್ ಮೈಂಡ್ ಡೇವಿಡ್ ಹೆಡ್ಲಿಯು ಮುಂಬೈ ದಾಳಿಯ ತನಿಖೆ ನಡೆಸಲು ಬಳಸಿದ ದಾಖಲೆಗಳನ್ನು ನಕಲಿ ಮಾಡಲು ಮತ್ತು ತಯಾರಿಸಲು ಯುಎಸ್ ನಲ್ಲಿರುವ ತನ್ನ ವಲಸೆ ಘಟಕವನ್ನು ಬಳಸಿದ್ದಾನೆ ಎಂಬ ಆರೋಪದ ಮೇಲೆ ಪಾಕಿಸ್ತಾನದ ಮಾಜಿ ಸೇನಾ ಕ್ಯಾಪ್ಟನ್ ಆಗಿದ್ದ ರಾಣಾ ಅವರನ್ನು ಭಾರತಕ್ಕೆ ಹಸ್ತಾಂತರಿಸುವಂತೆ ಭಾರತ ಕೋರಿದೆ.

ಪಾಕಿಸ್ತಾನಿ-ಅಮೆರಿಕನ್ ಭಯೋತ್ಪಾದಕ ಡೇವಿಡ್ ಕೋಲ್ಮನ್ ಹೆಡ್ಲಿಯು ಜುಲೈ 2016 ರಲ್ಲಿ ತನ್ನ ಸಹವರ್ತಿ ರಾಣಾ ಜೊತೆಗೆ ಚಿಕಾಗೋದಲ್ಲಿ ವಲಸೆ ವ್ಯವಹಾರವನ್ನು ನಡೆಸುತ್ತಿದ್ದ. 2008 ರ ಮುಂಬೈ ಭಯೋತ್ಪಾದಕ ದಾಳಿಯ ಆರೋಪಿಗಳನ್ನು ಭಾರತಕ್ಕೆ ಹಸ್ತಾಂತರಿಸಬೇಕೆಂಬ ಯುಎಸ್ ಸರ್ಕಾರದ ಮನವಿಯನ್ನು ಅಂಗೀಕರಿಸಿದ ಅಮೆರಿಕದ ನ್ಯಾಯಾಲಯದ ಆದೇಶವನ್ನು ರಾಣಾ ಈ ವರ್ಷದ ಜೂನ್ ನಲ್ಲಿ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ್ದರು.

ಇತ್ತೀಚಿನ ಸುದ್ದಿ