ಲೈಂಗಿಕ ದೌರ್ಜನ್ಯದ ಆರೋಪಿ ಮುರುಘಾಶ್ರೀ ಮತ್ತೆ ಬಂಧನ ಸಾಧ್ಯತೆ: ಮಠಕ್ಕೆ ಆಗಮಿಸಿದ ಪೊಲೀಸರು - Mahanayaka

ಲೈಂಗಿಕ ದೌರ್ಜನ್ಯದ ಆರೋಪಿ ಮುರುಘಾಶ್ರೀ ಮತ್ತೆ ಬಂಧನ ಸಾಧ್ಯತೆ: ಮಠಕ್ಕೆ ಆಗಮಿಸಿದ ಪೊಲೀಸರು

muruga shree
20/11/2023

ಚಿತ್ರದುರ್ಗ: ಅಪ್ರಾಪ್ತೆಯರಿಗೆ ಲೈಂಗಿಕ ದೌರ್ಜನ್ಯ ನೀಡಿದ  ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ಜಾಮೀನು ಪಡೆದು ಹೊರ ಬಂದಿದ್ದ ಚಿತ್ರದುರ್ಗದ ಮುರುಘಾ ಶ್ರೀಗೆ ಮತ್ತೆ ಸಂಕಷ್ಟ ಎದುರಾಗಿದೆ.

ಚಿತ್ರದುರ್ಗ ಜಿಲ್ಲಾ ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ದಾವಣಗೆರೆ ವಿರಕ್ತ ಮಠಕ್ಕೆ ಪೊಲೀಸರು ಆಗಮಿಸಿದ್ದು, ಮುರುಘಾಶ್ರೀಯನ್ನು ಪೊಲೀಸರು ಬಂಧಿಸುವ ಸಾಧ್ಯತೆ ಇದೆ.

ಮೊದಲ ಕೇಸ್‌ ನಲ್ಲಿ ಬೇಲ್‌ ಪಡೆದು ಬಿಡುಗಡೆಗೊಂಡಿದ್ದ ಮುರುಘಾಶ್ರೀಗೆ ಇದೀಗ ಎರಡನೇ ಕೇಸ್‌ ನಲ್ಲಿ ಸಂಕಷ್ಟ ಎದುರಾಗಿದೆ. ಎರಡನೇ ಕೇಸ್‌ ನ ವಿಚಾರಣೆ ಆರೋಪಿ ಮುರುಘಾಶ್ರೀ ಕೋರ್ಟ್‌ ಗೆ ಹಾಜರಾಗಬೇಕಿತ್ತು. ಆದ್ರೆ ಆರೋಪಿಯು ವಿಡಿಯೋ ಕಾನ್ಫರೆನ್ಸ್‌ ಮೂಲಕ ವಿಚಾರಣೆಗೆ ಹಾಜರಾಗಿದ್ದರು. ಇದಕ್ಕೆ ಸರ್ಕಾರ ಪರ ವಕೀಲರು ಆಕ್ಷೇಪ ವ್ಯಕ್ತಪಡಿಸಿದ್ದರು.

ನೇರವಾಗಿ ಕೋರ್ಟ್‌ ಗೆ ಹಾಜರಾಗುವಂತೆ  ಹೇಳಿದರೂ ವಿಡಿಯೋ ಕಾನ್ಫರೆನ್ಸ್‌ ಮೂಲಕ ಮುರುಘಾಶ್ರೀ ಹಾಜರಾಗಿದ್ದಾರೆ. ಹೀಗಾಗಿ ಆರೋಪಿ ಸ್ವಾಮೀಜಿ ವಿರುದ್ಧ ವಾರೆಂಟ್‌ ಗೆ ಸರ್ಕಾರಿ ವಕೀಲರು ಮನವಿ ಮಾಡಿದರು, ಹೀಗಾಗಿ 2ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನಾನ್‌ ಬೇಲ್‌ ಬಲ್‌ ವಾರೆಂಟ್‌ ಜಾರಿಗೊಳಿಸಿದೆ. ಇಂದು ಸಂಜೆಯೊಳಗೆ ಆರೋಪಿ ಮುರುಘಾಶ್ರೀ ಬಂಧನ ಸಾಧ್ಯತೆ ಇದೆ ಎನ್ನಲಾಗಿದೆ.

ಇತ್ತೀಚಿನ ಸುದ್ದಿ