ಬೀಫ್ ಇದೆ ಎಂಬ ಆರೋಪ: ಯುಪಿಯಲ್ಲಿ ಮುಸ್ಲಿಂ ಮನೆ ಮೇಲೆ ದಾಳಿ; ಮಹಿಳೆ ಸಾವು

ಬೀಫ್ ಇದೆ ಎಂದು ಆರೋಪಿಸಿ ಮುಸ್ಲಿಂ ಕುಟುಂಬದ ಮನೆಯ ಮೇಲೆ ಉತ್ತರ ಪ್ರದೇಶದ ಪೊಲೀಸರು ದಾಳಿ ನಡೆಸಿದ್ದು ಈ ದಾಳಿಯ ವೇಳೆ ಮಹಿಳೆ ಮೃತಪಟ್ಟಿರುವುದಾಗಿ ಆರೋಪಿಸಲಾಗಿದೆ. ಬಿಜನೂರು ಜಿಲ್ಲೆಯ ಕಥಾಯಿ ಗ್ರಾಮದಲ್ಲಿ ಹ ಈ ಘಟನೆ ನಡೆದಿದೆ.. 55 ವರ್ಷದ ರಜಿಯಾ ಮೃತಪಟ್ಟವರಾಗಿದ್ದಾರೆ.
ಈ ಮನೆಯಲ್ಲಿ ಬೀಫ್ ಇದೆ ಎಂಬ ಫೋನ್ ಕರೆಯನ್ನು ಆಧರಿಸಿ ಪೊಲೀಸರು ದಿಡೀರ್ ದಾಳಿ ನಡೆಸಿದ್ದರು. ಮತ್ತು ಈ ದಾಳಿಯ ಬಗ್ಗೆ ಯಾವ ಸೂಚನೆಯನ್ನೂ ಆ ಮನೆಯವರಿಗೆ ನೀಡಿರಲಿಲ್ಲ. ಈ ದಾಳಿಯನ್ನು ಈ ತಾಯಿ ಪ್ರಶ್ನಿಸಿದಾಗ ಪೊಲೀಸರು ಅತ್ಯಂತ ಕೆಟ್ಟದಾಗಿ ವರ್ತಿಸಿದ್ದಾರೆ ಎಂದು ಆರೋಪಿಸಲಾಗಿದೆ. ಕಾನ್ಸ್ಟೇಬಲ್ ಗಳಲ್ಲಿ ಒಬ್ಬರು ಅವರನ್ನು ನೂಕಿದ್ದಾರೆ. ಈ ಹಿನ್ನೆಲೆಯಲ್ಲಿ ಈ ತಾಯಿ ನೆಲಕ್ಕೆ ಬಿದ್ದಿದ್ದಾರೆ. ಬಳಿಕ ತಾಯಿಯನ್ನು ನಾವು ಆಸ್ಪತ್ರೆಗೆ ಕೊಂಡುಹೋದರೂ ಅವರು ಮಾರ್ಗ ಮಧ್ಯೆ ಮೃತಪಟ್ಟರು ಎಂದು ಮಗಳು ಫರ್ಹಾನ ಹೇಳಿದ್ದಾರೆ.
ಮಹಿಳೆಯರೇ ಇರುವ ಈ ಮನೆಗೆ ಪೊಲೀಸರು ಮಹಿಳಾ ಪೊಲೀಸ್ ಇಲ್ಲದೆಯೇ ಏಕಾಏಕಿ ಪ್ರವೇಶಿಸಿದ್ದಾರೆ ಮಾತ್ರ ಅಲ್ಲ ಮನೆಯಲ್ಲಿ ಬೀಫ್ ಸಿಕ್ಕಿಲ್ಲ ಅನ್ನುವುದು ಕೂಡ ವರದಿಯಾಗಿದೆ. ಇದು ಕಾನೂನಿಗೆ ವಿರುದ್ಧವಾಗಿದ್ದು ಇದರ ವಿರುದ್ಧ ನಾವು ಉನ್ನತ ಅಧಿಕಾರಿಗೆ ದೂರು ನೀಡುತ್ತೇವೆ ಎಂದು ಮನೆಯವರು ಹೇಳಿದ್ದಾರೆ. ಇದೇ ವೇಳೆ ಪೊಲೀಸರು ಕೂಡ ಸ್ಪಷ್ಟೀಕರಣ ನೀಡಿದ್ದು ಆ ತಾಯಿಗೆ ಈ ಮೊದಲೇ ಶ್ವಾಸಕೋಶದ ತೊಂದರೆ ಇತ್ತು ಮತ್ತು ಅವರು ಅದಕ್ಕಾಗಿ ಈ ಹಿಂದೆ ಚಿಕಿತ್ಸೆಯನ್ನೂ ಪಡೆದಿದ್ದರು ಎಂದು ಹೇಳಿದ್ದಾರೆ. ಹಾಗೆಯೇ ನಮಗೆ ಕರೆ ಮಾಡಿ ತಿಳಿಸಿದ ವ್ಯಕ್ತಿಯನ್ನು ನಾವು ಪತ್ತೆಹಚ್ಚಲು ಪ್ರಯತ್ನಿಸುತ್ತಿದ್ದೇವೆ ಎಂದು ಕೂಡ ಅವರು ಹೇಳಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth