ವಿಶ್ವದ ಅತ್ಯುತ್ತಮ ಗುಣಮಟ್ಟದ ಗೋಮಾಂಸ ಉತ್ಪಾದಿಸುವ ಗುರಿ ನನ್ನದು: ಮಾರ್ಕ್ ಝುಕರ್ ಬರ್ಗ್

ಅಮೆರಿಕ: ಫೇಸ್ ಬುಕ್, ವಾಟ್ಸಾಪ್ ಅಧಿಪತಿ, ಮೆಟಾ ಮಾಲಿಕ ಮಾರ್ಕ್ ಝುಕರ್ ಬರ್ಗ್ ಹೊಸತೊಂದು ಉದ್ಯಮದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಉದ್ಯಮ ಇದೀಗ ಭಾರತದಲ್ಲಿ ಭಾರೀ ಚರ್ಚಾ ವಿಚಾರವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹಾಟ್ ಟಾಪಿಕ್ ಆಗಿದೆ.
ಹೌದು…!ಬುಧವಾರ ಮಾರ್ಕ್ ಝುಕರ್ ಬರ್ಗ್ ಸರ್ಪ್ರೈಸ್ ಹೇಳಿಕೆಯೊಂದನ್ನು ಫೋಟೋವೊಂದನ್ನು ಪೋಸ್ಟ್ ಮಾಡುವ ಮೂಲಕ ನೀಡಿದ್ದಾರೆ. ಇನ್ಮುಂದೆ ವಿಶ್ವದಲ್ಲೇ ಅತ್ಯುತ್ತಮವಾದ ಗುಣಮಟ್ಟದ ಬೀಫ್(ಗೋಮಾಂಸ) ಉತ್ಪಾದಿಸುವ ಗುರಿಯೊಂದಿಗೆ ಗೋ ಸಾಕಾಣಿಕೆ ನಡೆಸಲು ಉದ್ದೇಶಿಸಿದ್ದೇನೆ ಎಂದಿದ್ದಾರೆ.
ಗೋವುಗಳಿಗೆ ಬಿಯರ್ ಮತ್ತು ಒಣ ಹಣ್ಣುಗಳಂತ ಉತ್ತಮ ಗುಣಮಟ್ಟದ ಹಣ್ಣುಗಳನ್ನು ನೀಡುವ ಮೂಲಕ ಉತ್ತಮ ಗುಣಮಟ್ಟದ ದನದ ಮಾಂಸ ಉತ್ಪಾದನೆ ಮಾಡುವುದಾಗಿ ಹೇಳಿಕೊಂಡಿದ್ದಾರೆ. ಝುಕರ್ ಬರ್ಗ್ ಅವರ ಪ್ರಯತ್ನಕ್ಕೆ ಅವರ ಪುತ್ರಿ ನೆರವು ನೀಡಲಿದ್ದಾರೆ ಅಂತ ಅವರು ತಮ್ಮ ಪೋಸ್ಟ್ ನಲ್ಲಿ ಹೇಳಿಕೊಂಡಿದ್ದಾರೆ.
ಇನ್ನೂ ಝುಕರ್ ಬರ್ಗ್ ಅವರ ಪೋಸ್ಟ್ ಶೇರ್ ಆಗುತ್ತಿದ್ದಂತೆಯೇ ಭಾರತದಲ್ಲಿ ಇದು ಭಾರೀ ಚರ್ಚಾ ವಿಚಾರವಾಗಿ ಕಾಣಿಸಿಕೊಂಡಿದೆ. ಪರ ವಿರೋಧಗಳ ಚರ್ಚೆಗಳಾಗುತ್ತಿವೆ. ಗೋಮಾಂಸ ವಿರೋಧಿಗಳು ಫೇಸ್ ಬುಕ್ ತ್ಯಜಿಸುವಿರೇ? ಎಂದು ಸಾಕಷ್ಟು ಜನರು ಫೇಸ್ ಬುಕ್ ಮತ್ತು ವಿವಿಧ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಶ್ನಿಸಿದ್ದಾರೆ.