ದುರಂತ: ಲಿವ್-ಇನ್ ಪಾಟ್ನರ್ ನನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ

30 ವರ್ಷದ ವ್ಯಕ್ತಿಯೊಬ್ಬ ತನ್ನ ಲಿವ್-ಇನ್ ಪಾಟ್ನರ್ ಮತ್ತು ಅವರ ಮೂರು ವರ್ಷದ ಮಗನನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಹಾರಾಷ್ಟ್ರದ ನಾಗ್ಪುರ ನಗರದ ಹೋಟೆಲ್ ಕೋಣೆಯಲ್ಲಿ ನಡೆದಿದೆ. ಸಚಿನ್ ವಿನೋದ್ ಕುಮಾರ್ ರಾವತ್, ನಜ್ನಿನ್ (29) ಮತ್ತು ಅವರ ಮಗ ಯುಗ್ ಅವರ ಶವಗಳು ಎಂಐಡಿಸಿ ಪ್ರದೇಶದ ಗಜಾನನ್ ಕಾಲೋನಿ ಬಳಿಯ ಗೋಲ್ಡನ್ ಕೀ ಹೋಟೆಲ್ ನ ಕೋಣೆಯಲ್ಲಿ ಸಿಬ್ಬಂದಿ ಪತ್ತೆ ಮಾಡಿದ್ದಾರೆ.
ಸಚಿನ್ ವಿನೋದ್ ಕುಮಾರ್ ರಾವತ್, ನಜ್ನಿನ್ (29) ಮತ್ತು ಅವರ ಮಗ ಯುಗ್ ಅವರ ಶವಗಳು ಎಂಐಡಿಸಿ ಪ್ರದೇಶದ ಗಜಾನನ್ ಕಾಲೋನಿ ಬಳಿಯ ಗೋಲ್ಡನ್ ಕೀ ಹೋಟೆಲ್ ನ ಕೋಣೆಯಲ್ಲಿ ಸಿಬ್ಬಂದಿ ಪತ್ತೆ ಮಾಡಿದ್ದಾರೆ.
ರಾವತ್ ಶವ ಸೀಲಿಂಗ್ ಫ್ಯಾನ್ ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ರೆ ಅವರ ಲಿವ್-ಇನ್ ಪಾರ್ಟ್ನರ್ ನಜ್ನಿನ್ ತಲೆಗೆ ಗಾಯ ಮತ್ತು ಸುತ್ತಿಗೆಯೊಂದಿಗೆ ಹತ್ತಿರದಲ್ಲಿ ರಕ್ತದ ಕಲೆಗಳು ಬಿದ್ದಿರುವುದು ಕಂಡುಬಂದಿದೆ. ಯುಗ್ ಅವರ ದೇಹದ ಮೇಲೆ ಯಾವುದೇ ಗಾಯಗಳು ಕಂಡುಬಂದಿಲ್ಲ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬಾಲಕನಿಗೆ ವಿಷಪ್ರಾಶನ ಅಥವಾ ಕತ್ತು ಹಿಸುಕಿ ಕೊಲ್ಲುವ ಮೊದಲು ರಾವತ್ ಸುತ್ತಿಗೆಯಿಂದ ನಜ್ನಿನ್ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾನೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ನಂತರ ಅವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.
ವೃತ್ತಿಯಲ್ಲಿ ಟ್ರಕ್ ಚಾಲಕರಾಗಿರುವ ರಾವತ್ ಅವರಿಗೆ ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ. ಆತ ಮೂಲತಃ ಮಧ್ಯಪ್ರದೇಶದ ನಜ್ನಿನ್ ಎಂಬಾಕೆಯೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ರಾವತ್ ತನ್ನ ಹೆಂಡತಿಗೆ ವಿಚ್ಛೇದನ ನೀಡಿರಲಿಲ್ಲ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth