ನಾಳೆ ರಾತ್ರಿಯಿಂದ 14 ದಿನ ರಾಜ್ಯಾದ್ಯಂತ ಬಿಗಿ ಕ್ರಮ | ರಾಜ್ಯಾದ್ಯಂತ ಲಾಕ್ - Mahanayaka

ನಾಳೆ ರಾತ್ರಿಯಿಂದ 14 ದಿನ ರಾಜ್ಯಾದ್ಯಂತ ಬಿಗಿ ಕ್ರಮ | ರಾಜ್ಯಾದ್ಯಂತ ಲಾಕ್

lockdown
26/04/2021

ಬೆಂಗಳೂರು: ನಾಳೆ ರಾತ್ರಿಯಿಂದ  14 ದಿನ ಕರ್ನಾಟಕ ರಾಜ್ಯದಲ್ಲಿ ಬಿಗಿ ಕ್ರಮವನ್ನು ಸರ್ಕಾರ ತೆಗೆದುಕೊಂಡಿದ್ದು, ಸಚಿವ ಸಂಪುಟ ಸಭೆಯ ಬಳಿಕ ನಿರ್ಧಾರವನ್ನು ಸರ್ಕಾರ ತೆಗೆದುಕೊಂಡಿದೆ.

ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಯಡಿಯೂರಪ್ಪ, ಸಾರಿಗೆ ವ್ಯವಸ್ಥೆ ಸೇರಿದಂತೆ ಎಲ್ಲವೂ ಬಂದ್ ಆಗಿರುತ್ತದೆ. ಕಟ್ಟಡ ಕಾರ್ಮಿಕರಿಗೆ ಯಾವುದೇ ನಿರ್ಬವಂಧವಿಲ್ಲ, ಗಾರ್ಮೆಂಟ್ ಹೊರತುಪಡಿಸಿ ಉಳಿದೆಲ್ಲ ಕೈಗಾರಿಕೆಗಳಿಗೆ  ವಿನಾಯಿತಿ ನೀಡಲಾಗಿದೆ.

14 ದಿನಗಳ ಕಾಲ ಸಾರಿಗೆ ವ್ಯವಸ್ಥೆ ಇರುವುದಿಲ್ಲ, ಉತ್ಪಾದನಾ ಕ್ಷೇತ್ರಕ್ಕೆ ವಿನಾಯಿತಿ ನೀಡಲಾಗಿದೆ. ರಾಜ್ಯದಲ್ಲಿ ಎಂದಿನಂತೆ ಕರ್ಫ್ಯೂ ಮುಂದುವರಿಯಲಿದೆ.

ಇತ್ತೀಚಿನ ಸುದ್ದಿ