ನಮಗೆ ರಾಷ್ಟ್ರಪ್ರೇಮ ಕಲಿಸಬೇಡಿ: ಪ್ರತೀ ತಿಂಗಳು ಒಂದು ಮಗು ತ್ರಿವರ್ಣ ಧ್ವಜವನ್ನು ಸುತ್ತಿಕೊಂಡು ಬರುತ್ತದೆ | ಕಾಂಗ್ರೆಸ್‌ ಸಂಸದ ಪ್ರತಾಪ್‌ ಸಿಂಗ್‌ ಬಜ್ವಾ  - Mahanayaka
10:27 PM Thursday 11 - December 2025

ನಮಗೆ ರಾಷ್ಟ್ರಪ್ರೇಮ ಕಲಿಸಬೇಡಿ: ಪ್ರತೀ ತಿಂಗಳು ಒಂದು ಮಗು ತ್ರಿವರ್ಣ ಧ್ವಜವನ್ನು ಸುತ್ತಿಕೊಂಡು ಬರುತ್ತದೆ | ಕಾಂಗ್ರೆಸ್‌ ಸಂಸದ ಪ್ರತಾಪ್‌ ಸಿಂಗ್‌ ಬಜ್ವಾ 

05/02/2021

ನವದೆಹಲಿ: ನಮಗೆ ರಾಷ್ಟ್ರವಾದವನ್ನು ಕಲಿಸಲು ಬರಬೇಡಿ. ಪ್ರತೀ ತಿಂಗಳು ಪಂಜಾಬ್ ಮತ್ತು ಹರ್ಯಾಣ ರಾಜ್ಯಗಳಲ್ಲಿ ಒಂದು ಮಗು ತ್ರಿವರ್ಣ ಧ್ವಜವನ್ನು ಸುತ್ತಿಕೊಂಡು ಜಡಶರೀರವಾಗಿ ಬರುತ್ತದೆ ಎಂದು ಕಾಂಗ್ರೆಸ್‌ ಸಂಸದ ಪ್ರತಾಪ್‌ ಸಿಂಗ್‌ ಬಜ್ವಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಸರಕಾರದ ಕೃಷಿಕಾಯ್ದೆಯನ್ನು ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆಯು ರಾಜ್ಯ ಸಭೆಯಲ್ಲಿ ಕೂಡ ಪ್ರತಿಧ್ವನಿಸಿದೆ. ರೈತರನ್ನು ಖಲಿಸ್ತಾನಿಗಳು, ರಾಷ್ಟ್ರ ವಿರೋಧಿಗಳು ಎಂದು ಬಿಂಬಿಸುತ್ತಿರುವುದರ ವಿರುದ್ಧ ಆಕ್ರೋ ವ್ಯಕ್ತಪಡಿಸಿದ ಕಾಂಗ್ರೆಸ್ ಸಂಸದ ಪ್ರತಾಪ್ ಸಿಂಗ್ ನಮಗೆ  ರಾಷ್ಟ್ರಪ್ರೇಮ ಕಲಿಸಿಕೊಡಲು ಬರಬೇಡಿ ಎಂದು ಮಾರ್ಮಿಕವಾಗಿ ಹೇಳಿದ್ದಾರೆ.

ಗಾಝಿಪುರದ ಪ್ರತಿಭಟನಾ ಸ್ಥಳಕ್ಕೆ 12 ಪಕ್ಷಗಳ ಸಂಸದರು ಭೇಟಿ ನೀಡಿದಾಗ ಪೊಲೀಸ್‌ ಅವರಿಗೆ ಅನುಮತಿ ನೀಡಲಿಲ್ಲ. ಇದು ಯಾವ ರೀತಿಯ ಪ್ರಜಾಪ್ರಭುತ್ವ? ಎಂದು ಪ್ರತಾಪ್ ಸಿಂಗ್ ಪ್ರಶ್ನಿಸಿದರು.

ರೈತರ ವಿರುದ್ಧ ಹಾಕಿದ ಬ್ಯಾರಿಕೇಡ್‌ ಗಳು ಬರ್ಲಿನ್‌ ಗೋಡೆಯನ್ನು ನೆನಪಿಸುತ್ತದೆ ಎಂದು ಹೇಳಿದ ಅವರು, ದಿಲ್ಲಿಯನ್ನು ಕೇಂದ್ರ ಸರಕಾರವು ಕಾಂಕ್ರೀಟ್‌ ಕೋಟೆಯನ್ನಾಗಿ ಮಾರ್ಪಡಿಸುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಇತ್ತೀಚಿನ ಸುದ್ದಿ