ನಮಸ್ಕಾರ​ ದೇವ್ರು…! ಡಾ.ಬ್ರೋ ತಿಂಗಳಿಗೆ ಎಷ್ಟು ಸಂಪಾದಿಸ್ತಾರೆ? - Mahanayaka
2:49 PM Saturday 18 - October 2025

ನಮಸ್ಕಾರ​ ದೇವ್ರು…! ಡಾ.ಬ್ರೋ ತಿಂಗಳಿಗೆ ಎಷ್ಟು ಸಂಪಾದಿಸ್ತಾರೆ?

dr bro
25/08/2024

ನಮಸ್ಕಾರ​ ದೇವ್ರು.. ಅಂದ ತಕ್ಷಣ ಡಾ.ಬ್ರೋ(Dr.Bro) ನೆನಪಾಗ್ತಾರೆ. ವಿದೇಶಗಳಲ್ಲಿ ಸುತ್ತುತ್ತಾ, ಆದೇಶದ ವಿವರಣೆ ನೀಡುತ್ತಾ, ಚಿತ್ರ ವಿಚಿತ್ರ ಸಂಗತಿಗಳನ್ನು ತಿಳಿಸುವ  ಡಾ.ಬ್ರೋ ಇದೀಗ ತನಗೆ ಯೂಟ್ಯೂಬ್ ನಿಂದ ಎಷ್ಟು ಆದಾಯ ಬರ್ತಿದೆ ಅನ್ನೋದನ್ನ ಬಹಿರಂಗಪಡಿಸಿದ್ದಾರೆ.


Provided by

ಮೊಟ್ಟ ಮೊದಲ ಬಾರಿಗೆ ಡ್ರಾ ಬ್ರೋ ಯೂಟ್ಯೂಬ್‌ ಲೈವ್‌ ಬಂದಿದ್ರು. ಈ ವೇಳೆ ಡಾ.ಬ್ರೋ ಫ್ಯಾನ್ಸ್  ನಿಮ್ಮ ಸಂಪಾದನೆ ಎಷ್ಟು ಅಂತ ಕೇಳಿದ್ದಾರೆ. ಇದಕ್ಕೆ ಡ್ರಾ.ಬ್ರೋ ಉತ್ತರಿಸಿದ್ದು, ಈ ಉತ್ತರಕ್ಕೆ ಅಭಿಮಾನಿಗಳು ಮೂಗಿನ ಮೇಲೆ ಬೆರಳಿಟ್ಟು, ಅಯ್ಯೋ ಇಷ್ಟೊಂದಾ? ಎಂದು ಪ್ರಶ್ನಿಸುವಂತಾಯಿತು.

ಕಳೆದ ತಿಂಗಳು  2100 ಡಾಲರ್‌ ಯೂಟ್ಯೂಬ್‌ ನಿಂದ ಬಂದಿದೆ ಎಂದು ಡಾ.ಬ್ರೋ ಅಭಿಮಾನಿಗಳ ಪ್ರಶ್ನೆಗೆ ಉತ್ತರಿಸಿದ್ದಾರೆ. 2100 ಡಾಲರ್‌ ಅಂದ್ರೆ ಭಾರತದ ಕರೆನ್ಸಿ ಪ್ರಕಾರ 1,76,051 ರೂಪಾಯಿ ಆಗುತ್ತೆ.

ಇದೀಗ ಈ ವಿಡಿಯೋ ಸಕ್ಕತ್ ವೈರಲ್ ಆಗಿದ್ದು, ಏನೂ ಇಲ್ಲದ ವ್ಯಕ್ತಿಯೊಬ್ಬರು ಯೂಟ್ಯೂಬ್ ಮೂಲಕ ಇಷ್ಟೊಂದು ಗಳಿಸಿದ್ದಾರೆ. ಇದು ಬೇರೆಯವರಿಗೆ ಮಾದರಿಯಾಗಿದೆ ಎಂದು ಹೇಳುತ್ತಿದ್ದಾರೆ. ಅಂದ ಹಾಗೆ ಡಾ.ಬ್ರೋ ಇಷ್ಟೊಂದು ಗಳಿಸಿದರೂ, ಅವರ ವಿದೇಶ ಪ್ರಯಾಣಕ್ಕೆ ಸಾಕಷ್ಟು ಖರ್ಚುಗಳು ಕೂಡ ಬರುತ್ತವಂತೆ.

ಏನೇ ಆಗಲಿ ಇತ್ತೀಚೆಗಷ್ಟೇ ಡಾ.ಬ್ರೋ ಗೋ ಪ್ರವಾಸ ಅಂತ ಸಂಸ್ಥೆಯೊಂದನ್ನು ತೆರೆದು ಆಸಕ್ತರನ್ನು ಪ್ರವಾಸಕ್ಕೆ ಕರೆದೊಯ್ಯುತ್ತಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ