ಮಹಿಳೆಯರು ನಮಾಝ್ ಮಾಡುವ ಕೊಠಡಿಗೆ ನುಗ್ಗಿ ಅಸಭ್ಯ ವರ್ತನೆ: ಯುವಕ ಅರೆಸ್ಟ್ - Mahanayaka
10:09 PM Tuesday 16 - September 2025

ಮಹಿಳೆಯರು ನಮಾಝ್ ಮಾಡುವ ಕೊಠಡಿಗೆ ನುಗ್ಗಿ ಅಸಭ್ಯ ವರ್ತನೆ: ಯುವಕ ಅರೆಸ್ಟ್

sujeeth shetty
30/04/2022

ಮಂಗಳೂರು: ತೊಕ್ಕೊಟ್ಟು ಮಸೀದಿಯಲ್ಲಿ ಮಹಿಳೆಯರು ನಮಾಝ್ ಮಾಡುವ ಕೊಠಡಿಗೆ ನುಗ್ಗಿ ಅಸಭ್ಯವಾಗಿ ವರ್ತಿಸಿದ ಆರೋಪದಲ್ಲಿ ಯುವಕನೋರ್ವನನ್ನು ಉಳ್ಳಾಲ ಠಾಣಾ ಪೊಲೀಸರು ಬಂಧಿಸಿದ್ದಾರೆ..


Provided by

ಬಂಧಿತ ಆರೋಪಿಯನ್ನು ಕಾರ್ಕಳ ತಾಲೂಕಿನ ನಿಟ್ಟೆ ನಿವಾಸಿ ಸುಜಿತ್ ಶೆಟ್ಟಿ(26) ಎಂದು‌ ಗುರುತಿಸಲಾಗಿದೆ.

ತೊಕ್ಕೊಟ್ಟಿನ ಹುದಾ ಜುಮ್ಮಾ ಮಸೀದಿಯಲ್ಲಿ ಲೈಲಾತುಲ ಖದರ್ ನ ರಾತ್ರಿ ವಿಶೇಷ ಕಾರ್ಯಕ್ರಮವನ್ನು ಕಳೆದ 28 ರಂದು ಏರ್ಪಡಿಸಲಾಗಿದ್ದು, ಈ ವೇಳೆ ಆರೋಪಿ ಸುಜಿತ್ ಶೆಟ್ಟಿಯು ಮಸೀದಿಯಲ್ಲಿ ಮಹಿಳೆಯರು ನಮಾಜ್ ಮಾಡುವ ಕೊಠಡಿಗೆ‌ ನುಗ್ಗಿ ಮಹಿಳೆಯರ ಕೈಹಿಡಿದು ಎಳೆದು, ಅಶ್ಲೀಲವಾಗಿ ವರ್ತಿಸಿದ್ದಲ್ಲದೇ ಪ್ಯಾಂಟ್ ಜಾರಿಸಿ ಗುಪ್ತಾಂಗ ತೋರಿಸಿ‌‌ ಮಾನಹಾನಿ‌ ಮಾಡಿದ್ದಾನೆ ಎಂದು‌ ದೂರು ದಾಖಲಾಗಿದೆ.

ಈ ಬಗ್ಗೆ ಮಹಿಳೆ ನೀಡಿದ ದೂರಿನ ಮೇರೆಗೆ ಉಳ್ಳಾಲ ಪೋಲಿಸ್ ಠಾಣೆಯಲ್ಲಿ ಸೆಕ್ಷನ್ 354 ರಂತೆ ಪ್ರಕರಣ ದಾಖಲಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1duNIQRfXnJcfQKWPzNqD

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಕುಡಿಯಲು ಹಣ ನೀಡಲಿಲ್ಲ ಎಂದು ತಂಗಿಯ ಮಗುವನ್ನು ಗೋಡೆಗೆ ಬಡಿದ ಪಾಪಿ!

ಪಿಎಸ್ ಐ ಮರು ಪರೀಕ್ಷೆ ನಿರ್ಧಾರದ ಬೆನ್ನಲ್ಲೇ ಸರ್ಕಾರಕ್ಕೆ ಮತ್ತೊಂದು ತಲೆನೋವು!

ವಾಟ್ಸಾಪ್ ನಲ್ಲಿ ಕ್ಯಾಶ್ ಬ್ಯಾಕ್ ಸಿಗಬೇಕಾದರೆ ಏನು ಮಾಡಬೇಕು ಗೊತ್ತಾ?

ಭಾರತ ಹಿಂದಿ ಭಾಷಿಗರದ್ದು, ಹಿಂದಿಯನ್ನು ಪ್ರೀತಿಸದವರು ಭಾರತ ಬಿಟ್ಟು ಹೋಗಿ:  ಉತ್ತರ ಪ್ರದೇಶ ಸಚಿವ

ಮದುವೆ ಮಂಟಪಕ್ಕೆ ನುಗ್ಗಿ ವಧುವನ್ನು ಗುಂಡಿಕ್ಕಿ ಕೊಂದ ಪ್ರಿಯಕರ!

ಇತ್ತೀಚಿನ ಸುದ್ದಿ