ನದಿಗೆ ಕಸ ಎಸೆಯದಂತೆ ಸಾರ್ವಜನಿಕರನ್ನು ತಡೆಯುವ ಈ ವ್ಯಕ್ತಿ ಯಾರು ಗೊತ್ತೆ? | ಇಲ್ಲಿದೆ ಕುತೂಹಲಕಾರಿ ಸ್ಟೋರಿ - Mahanayaka
9:20 AM Sunday 15 - September 2024

ನದಿಗೆ ಕಸ ಎಸೆಯದಂತೆ ಸಾರ್ವಜನಿಕರನ್ನು ತಡೆಯುವ ಈ ವ್ಯಕ್ತಿ ಯಾರು ಗೊತ್ತೆ? | ಇಲ್ಲಿದೆ ಕುತೂಹಲಕಾರಿ ಸ್ಟೋರಿ

01/11/2020

ನವದೆಹಲಿ: ಸ್ವಚ್ಛ ಭಾರತ ಅಂತ ಸಾವಿರಾರು ಕೋಟಿ ರೂಪಾಯಿಯನ್ನು ಅನಗತ್ಯವಾಗಿ  ವೆಚ್ಚಗಳನ್ನು ಮಾಡಿದರೂ ನದಿಗಳ ಸುರಕ್ಷತೆ ಸಾಧ್ಯವಾಗಿಲ್ಲ. ಅಂತಹದ್ದರಲ್ಲಿ ಇಲ್ಲೊಬ್ಬ ವ್ಯಕ್ತಿ ನದಿಗಳ ಸುರಕ್ಷತೆಗಾಗಿ ಮಾದರಿ ಹೋರಾಟ ಮಾಡುತ್ತಿದ್ದು, ಇದೀಗ ದೇಶಾದ್ಯಂತ ಸುದ್ದಿಯಾಗಿದ್ದಾರೆ.


ಮಹಾರಾಷ್ಟ್ರದ ನಾಸಿಕ್‌ ನ ಇಂದಿರಾನಗರ ಪ್ರದೇಶದ ಚಂದ್ರ ಕಿಶೋರ್ ಪಾಟೀಲ್ ಎಂಬವರೇ ಈ ಮಾದರಿ ಹೋರಾಟವನ್ನು ಮಾಡುತ್ತಿರುವ ಪರಿಸರ ಪ್ರೇಮಿ. ನಾಸಿಕ್ ನಲ್ಲಿರುವ ಗೋದಾವರಿ ನದಿಗೆ ಸಾರ್ವಜನಿಕರು ಪ್ಲಾಸ್ಟಿಕ್ ಸೇರಿದಂತೆ ಕಸದ ರಾಶಿಗಳನ್ನೇ ತಂದು ತುಂಬುತ್ತಿದ್ದಾರೆ. ಇದನ್ನು ತಡೆಯಲು ಈ ವ್ಯಕ್ತಿ ಮಾದರಿ ಪ್ರಯತ್ನವನ್ನು ಮಾಡಿದ್ದಾರೆ.


ಐಎಫ್‌ ಎಸ್ ಅಧಿಕಾರಿಯೊಬ್ಬರು ಶ್ವೇತಾ ಬೊಡ್ಡು ಅವರ ಕಣ್ಣಿಗೆ ಮೊದಲ ಬಾರಿಗೆ ಚಂದ್ರ ಕಿಶೋರ್ ಪಾಟೀಲ್ ಬಿದ್ದಿದ್ದಾರೆ. ಈ ವ್ಯಕ್ತಿಯ ಕಾರ್ಯ ನೋಡಿ ಬೊಡ್ಡು ಬೆರಗಾಗಿದ್ದಾರೆ ಮತ್ತು ಇವರ ಈ ಕಾರ್ಯವನ್ನು ಶ್ಲಾಘಿಸಿ ಟ್ವೀಟ್ ಮಾಡಿದ್ದಾರೆ.



Provided by

ಪಾಟೀಲ್ ಅವರು ನೀರನ್ನು ಸಂರಕ್ಷಿಸಲು ಬೆಳಗ್ಗಿನ ಸಮಯದಲ್ಲಿ ಎಲ್ಲರೂ ಎದ್ದೇಳುವುದಕ್ಕೂ ಮೊದಲೇ ನದಿಯ ಬದಿಯಲ್ಲಿ ಹೋಗಿ ನಿಲ್ಲುತ್ತಾರೆ ಮತ್ತು ಕೈಯಲ್ಲಿ ಸೀಟಿಯೊಂದನ್ನು ಊದುತ್ತಾ, ನದಿಗೆ ಯಾರಾದರೂ ಕಸ ಎಸೆಯಲು ಬಂದರೆ, ಅವರನ್ನು ಎಚ್ಚರಿಸುತ್ತಾರೆ ಮತ್ತು ತಡೆಯುತ್ತಾರೆ. ಇವರು ಈ ಕೆಲಸವನ್ನು ಸತತ 5 ವರ್ಷಗಳಿಂದ ಮಾಡುತ್ತಿದ್ದಾರಂತೆ. ಆದರೆ ಇಲ್ಲಿಯವರೆಗೆ ಯಾವುದೇ ಪ್ರಚಾರವನ್ನು ಪಡೆದುಕೊಳ್ಳದೇ ನಿಜವಾದ ಪರಿಸರ ಪ್ರೇಮಿಯಾಗಿದ್ದಾರೆ.


ಸಾರ್ವಜನಿಕರು ಕಸ ಎಸೆಯಲು ಬಂದಾಗ ಪಾಟೀಲ್ ಅವರು ತಡೆಯುತ್ತಾರೆ. ಈ ವೇಳೆ ಸಾರ್ವಜನಿಕರು ಅವರ ಜೊತೆಗೆ ಬಹಳ ಕೆಟ್ಟದಾಗಿ ನಡೆದುಕೊಂಡರೂ ಸಹ ಯಾವುದೇ ಬೇಸರ ಮಾಡಿಕೊಳ್ಳದೇ ತಮ್ಮ ಕೆಲಸವನ್ನು ಅವರು ಮುಂದುವರಿಸುತ್ತಾ ಹೋಗುತ್ತಿದ್ದಾರೆ.  ಹೀಗಾಗಿ ಸಾರ್ವಜನಿಕರು ಈಗ ನದಿಗೆ ಕಸವನ್ನು ಎಸೆಯದೇ ರಸ್ತೆಯ ಬದಿಯಲ್ಲಿಯೇ ಕಸವನ್ನಿಟ್ಟು  ಅಲ್ಲಿಂದ ತೆರಳುತ್ತಿದ್ದಾರೆ. ಬಳಿಕ ತ್ಯಾಜ್ಯ ವಿಲೇವಾರಿ ಮಾಡುವ ಸ್ವಚ್ಛತಾ ಸೈನಿಕರು ಈ ತ್ಯಾಜ್ಯಗಳನ್ನು ಕೊಂಡೊಯ್ದು ಡಂಪಿಂಗ್ ಯಾರ್ಡ್ ಗೆ ಹಾಕುತ್ತಾರೆ ಎಂದು ಪಾಟೀಲ್ ಹೇಳುತ್ತಾರೆ.





ಇತ್ತೀಚಿನ ಸುದ್ದಿ