ರಾಷ್ಟ್ರೀಕೃತ ಬ್ಯಾಂಕುಗಳು ಜನಸಾಮಾನ್ಯರಿಗೆ  ಸಹಕಾರಿಯಾಗಿವೆ - Mahanayaka
11:43 PM Wednesday 19 - March 2025

ರಾಷ್ಟ್ರೀಕೃತ ಬ್ಯಾಂಕುಗಳು ಜನಸಾಮಾನ್ಯರಿಗೆ  ಸಹಕಾರಿಯಾಗಿವೆ

canara bank
10/04/2023

ಹೊಸಕೋಟೆ: ಕೆನರಾ ಬ್ಯಾಂಕ್  ಗ್ರಾಮೀಣ ಸ್ವ ಉದ್ಯೋಗ ತರಬೇತಿ  (RSETI ) ಸೊಣ್ಣಹಳ್ಳಿಪುರ ಸಂಸ್ಥೆಯು ವಿಶ್ವ ಮಹಿಳಾ ದಿನಾಚರಣೆಯ ಪ್ರಯುಕ್ತ ಕಾರ್ಯಕ್ರಮವನ್ನು (08-03-2023) ರಂದು   ಹಮ್ಮಿಕೊಳ್ಳಲಾಗಿತ್ತು. ಸುಮಾರು  35 ಕ್ಕೂ  ಹೆಚ್ಚು  ಶಿಬಿರಾರ್ಥಿಗಳನ್ನೊಳಗೊಂಡಿದ್ದ 30 ದಿನಗಳ  ವಸ್ತ್ರ ಕಲಾ ಉದ್ಯಮ ತರಬೇತಿ ಶಿಬಿರದ ಮುಕ್ತಾಯ ಸಮಾರಂಭವನ್ನು ಸಂಸ್ಥೆಯಲ್ಲಿ ಹಮ್ಮಿಕೊಂಡಿದ್ದು ತರಬೇತಿ ಪಡೆದ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಣೆ ಮಾಡಲಾಯಿತು.


Provided by

ಮುಖ್ಯ ಅತಿಥಿಗಳಾಗಿ  ಆಗಮಿಸಿದ್ದ ಹೊಸಕೋಟೆ ಕೆನರಾ ಬ್ಯಾಂಕ್ ಶಾಖೆಯ  ವ್ಯವಸ್ಥಾಪಕರಾದ  ಭಾಸ್ಕರಂ ರವರು  ಮಾತನಾಡಿ, ಎಲ್ಲರಿಗೂ ಶುಭಾಶಯಗಳನ್ನು ಕೋರಿದರು. ನಂದಗುಡಿ ಕೆನರಾ ಬ್ಯಾಂಕ್ ಶಾಖೆಯ ವ್ಯವಸ್ಥಾಪಕಿ ಚಂದ್ರಿಕಾ ರವರು ಮಾತನಾಡಿ ಮಹಿಳೆಯರು ಸ್ವಾವಲಂಬಿ ಜೀವನ ನಡೆಸಲು ರಾಷ್ಟ್ರೀಕೃತ ಬ್ಯಾಂಕುಗಳು ಬಹಳಷ್ಟು ಸಹಕಾರಿಯಾಗಿವೆ. ನಿಮ್ಮ ಸ್ವ ಉದ್ಯೋಗದ ಜೀವನಕ್ಕೆ ಕೆನರಾ ಬ್ಯಾಂಕ್ ಸದಾ ಸಹಕರಿಸುತ್ತದೆ ಎಲ್ಲರೂ ಅದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಮಾತನಾಡಿದರು.ದೇಶದಲ್ಲಿನ  ನಿರುದ್ಯೋಗ ನಿವಾರಣೆಗೆ RSETI  ಸಂಸ್ಥೆಗಳು ಬೆನ್ನೆಲುಬಾಗಿವೆ ಎಂದರು.

ಸಂಸ್ಥೆಯ ನಿರ್ದೇಶಕರಾದ  ಎಂ. ಗಿರಿಯಪ್ಪ  ಮಾತನಾಡಿ, ಹೆಣ್ಣು ಕೇವಲ ಅಡುಗೆ ಮನೆಗೆ ಸೀಮಿತವಾಗಿರದೆ, ಎಲ್ಲಾ ರಂಗದಲ್ಲೂ ತನ್ನನ್ನು ತಾನು  ತೊಡಗಿಸಿಕೊಳ್ಳಬೇಕು. ಸ್ವತಂತ್ರ ಜೀವನ ನಡೆಸಬೇಕಾದರೆ  ಮೊದಲು  ಸ್ವಾವಲಂಬಿಗಳಾಗಬೇಕು, ಅದಕ್ಕಾಗಿ  ಸ್ವ ಉದ್ಯೋಗವನ್ನು  ಕೈಗೊಂಡರೆ ಮಾತ್ರ  ಸ್ವತಂತ್ರ ಜೀವನ ನಡೆಸಲು ಸಾಧ್ಯ ಎಂದರು.  ಈ ನಿಟ್ಟಿನಲ್ಲಿ ಮಹಿಳೆ ಇಂದು ಎಲ್ಲಾ ರಂಗದಲ್ಲೂ  ಸಾಧಕಿಯಾಗಿದ್ದಾಳೆ ಎಂದರೆ  ತಪ್ಪಾಗಲಾರದು ಎಂದರು.


Provided by

canara bank

ಮಹಿಳೆಯರಿಗೆ   ಸಮಾನತೆ ದೊರೆತದ್ದು  ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯಿಂದಲೇ ಹೊರತು ಯಾವುದೇ ಗುಡಿ ಗುಂಡಾರಗಳಿಂದ ಅಲ್ಲಾ ಎಂದು  ಮನವರಿಕೆ ಮಾಡಿಕೊಟ್ಟರು.  ಮಹಿಳೆಯರು ಯಾವಾಗ ಮೂಢನಂಬಿಕೆಯಿಂದ ಹೊರಬಂದು, ವೈಜ್ಞಾನಿಕವಾಗಿ ಆಲೋಚಿಸಿ ಬದುಕನ್ನು ಕಟ್ಟಿಕೊಳ್ಳಬಲ್ಲರೋ  ಅಂದು ಈ ದೇಶದ ಭವಿಷ್ಯ ಬದಲಾಗಲು ಸಾಧ್ಯ  ಎಂದೂ ತಿಳಿಸಿದರು.

“ಪಶು ಸಖಿ ಮತ್ತು ವನಸಖಿ” ಯೋಜನೆಯಡಿಯಲ್ಲಿ 6 ದಿನಗಳ ಕೌಶಲ್ಯ ಅಭಿವೃದ್ಧಿ ತರಬೇತಿ ಪಡೆದ ಸುಮಾರು 35 ಶಿಬಿರಾರ್ಥಿಗಳಿಗೆ  ಪ್ರಮಾಣ ಪತ್ರವನ್ನು ನೀಡಿ ಗೌರವಿಸಲಾಯಿತು.

ಇದೆ ಸಂದರ್ಭದಲ್ಲಿ ಹೊಸಕೋಟೆ MSME ಸುಲಭ್ ಶಾಖೆಯ ಹಿರಿಯ ಪ್ರಬಂಧಕರಾದ ಶ್ರೀಯುತ ಸಂಜಯ್ ಕುಮಾರ್ ವರ್ಮಾ ಹಾಗೂ ಸಂಸ್ಥೆಯ  ಸಿಬ್ಬಂದಿಗಳಾದ  ಮುನಿಕೃಷ್ಣ ಎಂ,  ಸುಗುಣ ಬಿ,  ನಾಗೇಶ್ ಕೆ. ಹಾಗೂ ಮುನಿಪಟಲಪ್ಪ  ಉಪಸ್ಥಿತರಿದ್ದರು.

ವರದಿ: RSETI ಸೊಣ್ಣಹಳ್ಳಿಪುರ ನಿರ್ದೇಶಕರು


ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD

ಯೂಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ