ನೀರು ಸೇದುತ್ತಿದ್ದ ವೇಳೆ ಶುರುವಾದ ಫಿಟ್ಸ್: ಬಾವಿಗೆ ಬಿದ್ದು ಯುವಕ ಸಾವು - Mahanayaka

ನೀರು ಸೇದುತ್ತಿದ್ದ ವೇಳೆ ಶುರುವಾದ ಫಿಟ್ಸ್: ಬಾವಿಗೆ ಬಿದ್ದು ಯುವಕ ಸಾವು

belthangady crime news
21/10/2022

ಬೆಳ್ತಂಗಡಿ: ಯುವಕನೋರ್ವ ಬಾವಿಯಿಂದ ನೀರು ಸೇದುತ್ತಿದ್ದ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಬಾವಿಗೆ ಬಿದ್ದ ಘಟನೆ ಕುವೆಟ್ಟು ಗ್ರಾಮದ ಮಂಜುಬೆಟ್ಟು ಎಂಬಲ್ಲಿ ಗುರುವಾರ ನಡೆದಿದೆ.

ಬೆಳ್ತಂಗಡಿ ತಾಲೂಕು ಬಂದಾರು ಗ್ರಾಮದ ನೇರೊಳ್ದಪಲಿಕೆ ಎಂಬಲ್ಲಿನ ನಿವಾಸಿ ಚರುಂಬೆ ಎಂಬವರ ಪುತ್ರ ಬಾಬು (34) ಮೃತಪಟ್ಟವರಾಗಿದ್ದಾರೆ.

ಪಿಲಿಚಂಡಿಕಲ್ಲು ಸಮೀಪದ ಮಂಜುಬೆಟ್ಟುವಿನ ತಾಯಿಯ ಅಕ್ಕನ ಮನೆಗೆ ತನ್ನ ತಾಯಿಯೊಂದಿಗೆ  ಬಂದಿದ್ದ ಇವರು ಫಿಟ್ಸ್ ರೋಗ  ಪೀಡಿತರಾಗಿದ್ದು,  ದೊಡ್ಡಮ್ಮನ ಮನೆಯ ಬಾವಿಯಿಂದ ನೀರು ಸೇದುತ್ತಿದ್ದ  ವೇಳೆ ಫಿಟ್ಸ್ ಖಾಯಿಲೆ ಶುರುವಾಗಿ ಕಾಲು ಜಾರಿ ಬಾವಿಗೆ ಬಿದ್ದು ಮೃತಪಟ್ಟಿದ್ದಾರೆ. ಈ ಬಗ್ಗೆ  ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/GoQnwP3qNkmAbAPcjb8n8F

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ