ಸಿನಿಮಾಗಳಲ್ಲಿ ಕಾನೂನು ಕೈಗೆತ್ತಿಕೊಳ್ಳುವ ಪಾತ್ರಗಳಿಗೆ ಕಡಿವಾಣ ಅಗತ್ಯ: ನಿರ್ದೇಶಕ ರಘುನಂದನ
ಇಂದು ಸಿನಿಮಾದಲ್ಲಿನ ಹಿಂಸೆಯ ಸ್ವರೂಪ ಬದಲಾಗುತ್ತಿದ್ದು, ಕಾನೂನನ್ನು ಕೈಗೆ ತೆಗೆದುಕೊಳ್ಳುತ್ತಿರುವ ನಾಯಕ ಪಾತ್ರಗಳೇ ಹೆಚ್ಚುತ್ತಿವೆ. ಪರದೆಯ ಮೇಲೆ ಸಿದ್ಧಾಂತದ ಹೆಸರಿನಲ್ಲಿ ಹಿಂಸೆಯನ್ನು ಅನುಮೋದಿಸುವುದು ಅತ್ಯಂತ ಕಳವಳಕಾರಿ ಸಂಗತಿಯಾಗಿದೆ ಎಂದು ಹಿರಿಯ ನಾಟಕಕಾರ ಹಾಗೂ ನಿರ್ದೇಶಕ ರಘುನಂದನ ಹೇಳಿದರು.
ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್‌ನಲ್ಲಿ ‘ಸಿನೆಮಾದಲ್ಲಿ ಫ್ಯಾಸಿಸಂ’ ಎಂಬ ವಿಷಯದ ಕುರಿತು ಮಾತನಾಡಿದ ಶ್ರೀ ರಘುನಂದನ ಜನಪ್ರಿಯ ಸಿನಿಮಾ ಪ್ರಕಾರವು ನಮ್ಮ ಸಮಾಜದ ಕೆಲವು ಪ್ರವೃತ್ತಿಗಳನ್ನು ಪ್ರತಿಬಿಂಬಿಸುತ್ತದೆ. ‘ಕಾನೂನಿನ ಮೇಲಿನ ಗೌರವದಿಂದ ದೂರ ಸರಿದು ನಾವು ಕಾನೂನನ್ನು ಕೈಗೆ ತೆಗೆದುಕೊಳ್ಳುವತ್ತ ಸಾಗಿದ್ದೇವೆ. ಈಗ ತೆರೆಯ ಮೇಲೂ ಈ ಬಗೆಯ ಸೈದ್ಧಾಂತಿಕ ಹಿಂಸೆ ಸಾಮಾನ್ಯವಾಗಿದೆ ಎಂದು ಅವರು ವಿವರಿಸಿದರು.
ಜಂಜೀರ್ (1973), ಶೋಲೆ (1975), ಗಂಗಾಜಲ್ (2003), ಮಾನ್ಸೂನ್ ಶೂಟೌಟ್ (2013), ವಿಕ್ರಮ್ ವೇದಾ (2017), ಮುಲ್ಕ್ (2018) ಮುಂತಾದ ಚಿತ್ರಗಳ ದೃಶ್ಯಗಳೊಂದಿಗೆ ತಮ್ಮ ದೃಷ್ಟಿಕೋನವನ್ನು ವಿವರಿಸುತ್ತಾ ಅವರು ಕಾಲಾನುಕ್ರಮದಲ್ಲಿ ಚಿತ್ರಗಳು ಸಮಾಜದಲ್ಲಿ ಬದಲಾಗುತ್ತಿರುವ ಹಿಂಸೆಯ ಸ್ವರೂಪವನ್ನು ಸಹ ಪ್ರತಿಬಿಂಬಿಸುತ್ತದೆ ಎಂದರು. ಅನೇಕ ಮೆಗಾ-ಬಜೆಟ್ ಚಲನಚಿತ್ರಗಳು ಬಹುತೇಕ ಫ್ಯಾಸಿಸ್ಟ್ ಪ್ರವೃತ್ತಿಯನ್ನು ಅನುಮೋದಿಸುತ್ತಾ ಜನರನ್ನು ವಾಸ್ತವದಿಂದ ದೂರಕ್ಕೆ ಕರೆದೊಯ್ಯುವ ಬಗ್ಗೆ ಅವರು ಕಳವಳ ವ್ಯಕ್ತಪಡಿಸಿದರು.
ಜಿಸಿಪಿಎಸ್ ಮುಖ್ಯಸ್ಥ ಪ್ರೊ.ವರದೇಶ್ ಹಿರೇಗಂಗೆ ಮತ್ತು ಪ್ರೊ.ಫಣಿರಾಜ್ ಸಂವಾದವನ್ನು ನಡೆಸಿಕೊಟ್ಟರು ಹಾಗೂ ವಿದ್ಯಾರ್ಥಿಗಳು ಚರ್ಚೆಯಲ್ಲಿ ಭಾಗವಹಿಸಿದ್ದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/GoQnwP3qNkmAbAPcjb8n8F
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka