ಉಗಾಂಡದಲ್ಲಿ ಹೊಸ ರೋಗ ಉದ್ಬವ: ಜನರಲ್ಲಿ ಭಯ, ಆತಂಕ ಶುರು
ಡಿಂಕ ಡಿಂಕ ರೋಗ ಎಂದೇ ಗುರುತಿಸಿಕೊಂಡಿರುವ ಹೊಸ ಕಾಯಿಲೆಯೊಂದು ಉಗಾಂಡಾದ ಉದ್ದಕ್ಕೂ ಭಯ ಮತ್ತು ಆತಂಕವನ್ನು ಸೃಷ್ಟಿಸಿದೆ. ಈ ಕಾಯಿಲೆಗೆ ಕಾರಣವೇನು ಅನ್ನುವುದು ಈವರೆಗೂ ಗೊತ್ತಾಗಿಲ್ಲ. ಆದರೆ ಈ ರೋಗಕ್ಕೆ ತುತ್ತಾದವರು ನೃತ್ಯ ಮಾಡುವಂತೆ ಕಂಪಿಸುತ್ತಾರೆ. ಆದ್ದರಿಂದಲೇ ಈ ಕಾಯಿಲೆಗೆ ಡಿಂಕ ಡಿಂಕ ಎಂಬ ಹೆಸರು ಬಂದಿದೆ ಎಂದು ಹೇಳಲಾಗಿದೆ.
ಈ ಕಾಯಿಲೆಯು ಹೆಚ್ಚಾಗಿ ಮಕ್ಕಳು ಮತ್ತು ಮಹಿಳೆಯರಲ್ಲಿ ಕಾಣಿಸಿಕೊಳ್ಳುತ್ತಿದೆ. ದೇಹವಿಡೀ ಕಂಪಿಸುವುದರಿಂದ ಈ ಕಾಯಿಲೆಗೆ ತುತ್ತಾದವರು ನಡೆಯುವುದಕ್ಕೂ ತ್ರಾಸ ಪಡುತ್ತಿದ್ದಾರೆ. ದೇಹ ಕಂಪಿಸುವುದರ ಹೊರತಾಗಿ ತೀವ್ರ ಜ್ವರ, ಆಯಾಸ ಮತ್ತು ಕೆಲವೊಮ್ಮೆ ಪಕ್ಷ ಘಾತವೂ ಆಗುತ್ತಿದೆ.
ಈಗಾಗಲೇ 300 ಕ್ಕಿಂತಲೂ ಅಧಿಕ ಮಂದಿ ಆಸ್ಪತ್ರೆಗೆ ಧಾವಿಸಿದ ದಾಖಲೆ ಇದೆ. ಸದ್ಯ ಇದಕ್ಕೆ ಬೇರೆ ಔಷಧಿ ಕಂಡು ಹುಡುಕಿಲ್ಲ ವಾಗಿರುವುದರಿಂದ ಆಂಟಿ ಬಯೋಟಿಕ್ ಔಷಧವನ್ನು ನೀಡಲಾಗುತ್ತಿದೆ ಎಂದು ವರದಿಯಾಗಿದೆ.
ಆದರೆ ಜನರು ವೈದ್ಯರ ಹತ್ತಿರ ಬರುವುದಕ್ಕಿಂತ ಹೆಚ್ಚು ಮಂತ್ರವಾದಿಗಳ ಬಳಿಗೆ ಹೋಗುತ್ತಿದ್ದಾರೆ. ಆದ್ದರಿಂದ ಆಸ್ಪತ್ರೆಯಲ್ಲಿ ದಾಖಲಾದ ಸಂಖ್ಯೆಗಿಂತ ಎಷ್ಟೋ ಪಟ್ಟು ಅಧಿಕ ಮಂದಿ ಈ ರೋಗಕ್ಕೆ ತುತ್ತಾಗಿರಬಹುದು ಎಂದು ಶಂಕಿಸಲಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj