ಬಿಹಾರದಲ್ಲಿ ರಾಜಕೀಯ ಗುದ್ದಾಟ: ಸ್ಪರ್ಧೆ ಮಾಡ್ತಾರ ಲಾಲೂ ಪುತ್ರಿಯರು..? - Mahanayaka

ಬಿಹಾರದಲ್ಲಿ ರಾಜಕೀಯ ಗುದ್ದಾಟ: ಸ್ಪರ್ಧೆ ಮಾಡ್ತಾರ ಲಾಲೂ ಪುತ್ರಿಯರು..?

24/03/2024


Provided by

ಬಿಹಾರದಲ್ಲಿ ಪಶುಪತಿ ಪರಾಸ್ ಅವರನ್ನು ಬದಿಗಿಟ್ಟು ಎನ್ ಡಿಎ ತನ್ನ ಸೀಟು ಹಂಚಿಕೆ ಒಪ್ಪಂದವನ್ನು ಅಂತಿಮಗೊಳಿಸಿದೆ. ಹೀಗಾಗಿ ರಾಷ್ಟ್ರೀಯ ಜನತಾ ದಳ (ಆರ್ ಜೆಡಿ) ಹೊಸ ಸವಾಲುಗಳನ್ನು ಎದುರಿಸುತ್ತಿದೆ. ಒಂದು ಕಾಲದಲ್ಲಿ ನಿತೀಶ್ ಕುಮಾರ್ ಅವರ ಆಪ್ತರಾಗಿದ್ದ ಜೆಡಿಯು ಶಾಸಕಿ ಬಿಮಾ ಭಾರತಿ ಶನಿವಾರ ಪಕ್ಷವನ್ನು ತೊರೆದು ಲಾಲು ಯಾದವ್ ಅವರ ಆರ್ ಜೆಡಿಗೆ ಸೇರಿದರು. ಅವರನ್ನು ಪೂರ್ಣಿಯಾದಿಂದ ಲೋಕಸಭಾ ಚುನಾವಣೆಯಲ್ಲಿ ಆರ್ ಜೆಡಿ ಕಣಕ್ಕಿಳಿಸುವ ಸಾಧ್ಯತೆಯಿದೆ.

ಪೂರ್ಣಿಯಾದ ಜನರು ನಮಗೆ ಮತ ಚಲಾಯಿಸಲು ಸಿದ್ಧರಾಗಿದ್ದಾರೆ. ನನ್ನ ಪಕ್ಷ ಕೇಳಿದರೆ ನಾನು ಪೂರ್ಣಿಯಾದಿಂದ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ ಎಂದು ಬಿಹಾರದ ಮಾಜಿ ಸಚಿವೆ ಉಮಾ ಭಾರತಿ ಹೇಳಿದ್ದಾರೆ. ಆರ್ ಜೆಡಿ ಇಂದು ಬಿಹಾರಕ್ಕೆ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡುವ ಸಾಧ್ಯತೆಯಿದೆ. ಈ ಪಟ್ಟಿಯಲ್ಲಿ ಬಿಹಾರದ ಮಾಜಿ ಮುಖ್ಯಮಂತ್ರಿ ಮತ್ತು ಆರ್ ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರ ಪುತ್ರಿಯರಾದ ರೋಹಿಣಿ ಆಚಾರ್ಯ ಮತ್ತು ಮಿಸಾ ಭಾರತಿ ಅವರ ಹೆಸರುಗಳಿವೆ. ರೋಹಿಣಿ ಆಚಾರ್ಯ ಸರನ್ ಕ್ಷೇತ್ರದಿಂದ ಸ್ಪರ್ಧಿಸುವ ನಿರೀಕ್ಷೆಯಿದ್ದರೆ, ಮಿಸಾ ಭಾರತಿ ಪಾಟಲೀಪುತ್ರ ಕ್ಷೇತ್ರದಿಂದ ಸ್ಪರ್ಧಿಸುವ ಸಾಧ್ಯತೆ ಇದೆ.

ಭಿಮಾ ಭಾರತಿ ಅವರ ಪ್ರವೇಶವು ಬಿಹಾರದಲ್ಲಿ ಆರ್ ಜೆಡಿ ನೇತೃತ್ವದ ಮಹಾಘಟಬಂಧನ್ ನಲ್ಲಿ ಹೊಸ ಬಿರುಕು ಸೂಚಿಸಿದೆ. ಉಮಾ ಭಾರತಿ ಅವರು ಪೂರ್ಣಿಯಾದಿಂದ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಇಚ್ಛೆಯನ್ನು ವ್ಯಕ್ತಪಡಿಸಿದ್ದರೆ, ಪಪ್ಪು ಯಾದವ್ ಅವರು ಈ ಸ್ಥಾನದ ಮೇಲಿನ ತಮ್ಮ ಹಕ್ಕನ್ನು ಸೂಚಿಸಿ ಟ್ವೀಟ್ ಮಾಡಿದ್ದಾರೆ. ಯಾದವ್ ಇತ್ತೀಚೆಗೆ ತಮ್ಮ ಜನ ಅಧಿಕಾರ್ ಪಕ್ಷವನ್ನು ಕಾಂಗ್ರೆಸ್‌ನಲ್ಲಿ ವಿಲೀನಗೊಳಿಸಿದ್ದಾರೆ ಮತ್ತು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಸಾಧ್ಯತೆಯಿದೆ. ಅವರು ಪೂರ್ಣಿಯಾ ಸ್ಥಾನದಿಂದ ಸ್ಪರ್ಧಿಸಲು ಬಯಸಿದ್ದಾರೆ. “ನಾನು ಸಾಯುತ್ತೇನೆ, ಕಾಂಗ್ರೆಸ್ ತೊರೆಯುವುದಿಲ್ಲ. ನಾನು ಜಗತ್ತನ್ನು ತೊರೆಯುತ್ತೇನೆ, ಪೂರ್ಣಿಯಾವನ್ನು ಬಿಡುವುದಿಲ್ಲ” ಎಂದು ಪಪ್ಪು ಯಾದವ್ ಹೇಳಿದರು. 2019 ರಲ್ಲಿ ಜನತಾದಳ (ಯುನೈಟೆಡ್) ನ ಸಂತೋಷ್ ಕುಮಾರ್ ಎನ್ ಡಿಎ ಬಣದ ಭಾಗವಾಗಿ ಪೂರ್ಣಿಯಾ ಸ್ಥಾನವನ್ನು ಗೆದ್ದಿದ್ದರು.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ