ರಾಜ್ ಕೋಟ್ ಗೇಮ್ ಜೋನ್‌ನಲ್ಲಿ ಅಗ್ನಿ ಅವಘಡ: ಬದುಕು ಕಟ್ಟುವ ಮುನ್ನವೇ ಬಲಿಯಾದ ನವವಿವಾಹಿತ ದಂಪತಿ - Mahanayaka
11:03 AM Saturday 23 - August 2025

ರಾಜ್ ಕೋಟ್ ಗೇಮ್ ಜೋನ್‌ನಲ್ಲಿ ಅಗ್ನಿ ಅವಘಡ: ಬದುಕು ಕಟ್ಟುವ ಮುನ್ನವೇ ಬಲಿಯಾದ ನವವಿವಾಹಿತ ದಂಪತಿ

27/05/2024


Provided by

ಗುಜರಾತ್ ನ ರಾಜ್‌ಕೋಟ್ ನ ಗೇಮಿಂಗ್ ವಲಯದಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ಕನಿಷ್ಠ 27 ಜನರು ಸಾವನ್ನಪ್ಪಿದ್ದಾರೆ. ಇದರಲ್ಲಿ ನವವಿವಾಹಿತ ದಂಪತಿ ಕೂಡಾ ಸಾವನ್ನಪ್ಪಿದ್ದಾರೆ. ಕೆನಡಾದಲ್ಲಿ ಓದುತ್ತಿದ್ದ ಅಕ್ಷಯ್ ಧೋಲಾರಿಯಾ ಮತ್ತು ಅವರ  ಪತ್ನಿ ಖ್ಯಾತಿ ಸ್ವಾಲಿವಾ ಶನಿವಾರ ಸಂಜೆ ರಾಜ್ ಕೋಟ್ ನ ಟಿಆರ್ ಪಿ ಗೇಮ್ ಝೋನ್‌ನಲ್ಲಿ ಇದ್ದಾಗ ಈ ಅವಘಡ ಸಂಭವಿಸಿದೆ.

ಅಕ್ಷಯ್ ಅವರ ಕುಟುಂಬ ಸದಸ್ಯರ ಪ್ರಕಾರ, ಈ ವರ್ಷದ ಡಿಸೆಂಬರ್ ನಲ್ಲಿ ಹಿಂದೂ ಆಚರಣೆಗಳ ಪ್ರಕಾರ ಇವರಿಬ್ಬರ ಭವ್ಯ ವಿವಾಹ ಸಮಾರಂಭವನ್ನು ನಿಗದಿಪಡಿಸಲಾಗಿತ್ತು. ಆದರೆ ಈ ಘಟನೆಯಲ್ಲಿ ಅವರು ಪ್ರಾಣ ಕಳೆದುಕೊಂಡಿದ್ದಾರೆ.
ಈ ಘಟನೆಯ ನಂತರ ಯುಎಸ್‌ನಲ್ಲಿ ವಾಸಿಸುವ ಅಕ್ಷಯ್ ಅವರ ಪೋಷಕರು ರಾಜ್‌‌ಕೋಟ್ ಗೆ ತೆರಳಿದ್ದಾರೆ. ಅವರ ಗುರುತನ್ನು ದೃಢೀಕರಿಸಲು ಪೊಲೀಸರು ಸಂತ್ರಸ್ತರ ಪೋಷಕರಿಂದ ಡಿಎನ್ಎ ಮಾದರಿಗಳನ್ನು ಕೇಳಿದ್ದಾರೆ.

ಶನಿವಾರ ರಾಜ್‌ಕೋಟ್ ನ ಗೇಮಿಂಗ್ ವಲಯದಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿದ್ದು, ಇದು 12 ವರ್ಷಕ್ಕಿಂತ ಕಡಿಮೆ ವಯಸ್ಸಿನ ನಾಲ್ಕು ಮಕ್ಕಳು ಸೇರಿದಂತೆ ಕನಿಷ್ಠ 27 ಜನರನ್ನು ಬಲಿ ತೆಗೆದುಕೊಂಡಿದೆ.
ಅಧಿಕಾರಿಗಳ ಪ್ರಕಾರ, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ.

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ