ಮಾನವೀಯತೆ ಇಲ್ಲ, ಇವರು ಸ್ಟಾರ್‌ ಗಳಾ? ದೊಡ್ಡ ಮನುಷ್ಯರಾ?|  ರೇಣುಕಾಸ್ವಾಮಿ ತಂದೆ ಕಣ್ಣೀರು - Mahanayaka

ಮಾನವೀಯತೆ ಇಲ್ಲ, ಇವರು ಸ್ಟಾರ್‌ ಗಳಾ? ದೊಡ್ಡ ಮನುಷ್ಯರಾ?|  ರೇಣುಕಾಸ್ವಾಮಿ ತಂದೆ ಕಣ್ಣೀರು

darshan
12/06/2024

ಚಿತ್ರದುರ್ಗ: ಮಾನವೀಯತೆ ಇಲ್ಲ, ಇವರೆಲ್ಲ ಕೊಲೆಗಡುಕರು, ಇವರು ಸ್ಟಾರ್‌ ಗಳಾ, ಇವರು ದೊಡ್ಡ ಮನುಷ್ಯರಾ? ಎಂದು ಹತ್ಯೆಗೀಡಾದ ರೇಣುಕಾಸ್ವಾಮಿ ಅವರ ತಂದೆ ತಂದೆ ಕಾಶಿನಾಥ ಶಿವನಗೌಡ ನಟ ದರ್ಶನ್ ಹಾಗೂ ತಂಡದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಗನ ಅಂತ್ಯಕ್ರಿಯೆ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಇವರೆಲ್ಲ ದೊಡ್ಡ ದೊಡ್ಡ ಮನುಷ್ಯರು, ದೊಡ್ಡ ದೊಡ್ಡ ಸ್ಟಾರ್ ಗಳು… ಏನ್ರೀ ಇದು ವ್ಯವಸ್ಥೆ’ ಎಂದು ಕಣ್ಣೀರಿಟ್ಟರು.

ಇನ್ನು ಏನು ಮಾತನಾಡಿ ಏನು ಪ್ರಯೋಜನ,  ಹೋದ ಮಗ ವಾಪಸ್ ಬರ್ತಾನಾ, ಅವನ್ಯಾರೋ ಜೀವನ ಕೊಡ್ತಾನಾ?  ಮಗನಿಗೆ ಎದೆ, ಮರ್ಮಾಂಗ, ಮುಖ, ಕಾಲು, ಸೇರಿದಂತೆ ದೇಹದ ವಿವಿಧ ಭಾಗಗಳಿಗೆ ಹೊಡೆದು ಸಾಯಿಸಿದ್ದಾರೆ  ಎಂದು ಕಣ್ಣೀರು ಹಾಕಿದರು.

ರೇಣುಕಾಸ್ವಾಮಿ ತಾಯಿ ರತ್ನಮ್ಮ ಮಾತನಾಡಿ, ನನ್ನ ಮಗ ವಿಲವಿಲ ಒದ್ದಾಡಿ ಸತ್ತಂತೆ ದರ್ಶನ್ ಸಾಯಬೇಕು. ಪವಿತ್ರಾ ಗೌಡಳನ್ನು ಯಾವುದೇ ಕಾರಣಕ್ಕೂ ಬಿಡಬಾರದು ಎಂದು ಕಣ್ಣೀರಿಡುತ್ತಾ ಹಿಡಿಶಾಪ ಹಾಕಿದರು.

15 ದಿನದೊಳಗೆ ದರ್ಶನ್ ಸಾಯಲಿ. ನಮ್ ವಂಶ ನಿರ್ವಂಶ ಮಾಡಿದ ದರ್ಶನ್‌ ಗೆ ತಕ್ಕ ಶಾಸ್ತಿ ಆಗಲಿ. ನನ್ನ ಮಗನನ್ನು ಕೊಂದಂತೆ ಅವನನ್ನು ಸಾಯಿಸಬೇಕು’ ಎಂದು ಆಕ್ರೋಶ ವ್ಯಕ್ತಪಡಿಸಿದರಲ್ಲದೇ ‘ಗಂಡ ಬರುತ್ತಾನೆ ಎಂದು ನನ್ನ ಸೊಸೆ ಕಾದು ಕುಳಿತಿದ್ದಳು. ಪಾಪಿಗಳಿಗೆ ತಕ್ಕ ಶಿಕ್ಷೆ ಆಗಬೇಕು ಎಂದು ಕಣ್ಣೀರಿಟ್ಟರು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ