ಯುವಕನಿಗೆ ಹಲ್ಲೆ, ಜೀವ ಬೆದರಿಕೆ: ಇಬ್ಬರು ಪೊಲೀಸ್ ಅಧಿಕಾರಿಗಳ ವಿರುದ್ಧ ಜಾಮೀನು ರಹಿತ ವಾರಂಟ್ ಜಾರಿ
ಉಡುಪಿ: ಯುವಕನ ಮೇಲಿನ ಹಲ್ಲೆ ಮತ್ತು ಜೀವಬೆದರಿಕೆ ಪ್ರಕರಣಕ್ಕೆ ಸಂಬಂಧಿಸಿ ನಿರಂತರ ನ್ಯಾಯಾಲಯಕ್ಕೆ ವಿಚಾರಣೆ ಹಾಜರಾಗದ ಎಸ್ಸೈ ಶಕ್ತಿ ವೇಲು ಮತ್ತು ಪೊಲೀಸ್ ನಿರೀಕ್ಷಕ ಶರಣಗೌಡ ವಿರುದ್ಧ ಉಡುಪಿ ಪ್ರಿನ್ಸಿಪಲ್ ಸಿವಿಲ್ ಜಡ್ಜ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯ ನ.28ರಂದು ಜಾಮೀನು ರಹಿತ ವಾರಂಟ್ ಜಾರಿಗೊಳಿಸಿ ಆದೇಶ ಹೊರಡಿಸಿದೆ.
ಮಲ್ಪೆ ಪೊಲೀಸ್ ಠಾಣೆ ವ್ಯಾಪ್ತಿಯ ಹೂಡೆಯ ಹಿದಾಯತುಲ್ಲ (27) ಎಂಬವರ ಮನೆಗೆ ಎಸ್ಸೆ ಶಕ್ತಿವೇಲು ಮತ್ತು ಪೊಲೀಸ್ ನಿರೀಕ್ಷಕ ಶರಣಗೌಡ ಮತ್ತು ಏಳು ಮಂದಿಯ ಪೊಲೀಸ್ ತಂಡ 2021ರ ನ.29ರ ತಡರಾತ್ರಿ ಅಕ್ರಮವಾಗಿ ನುಗ್ಗಿ ಹಿದಾಯತುಲ್ಲಾ ಅವರಿಗೆ ಥಳಿಸಿ, ಕಾನೂನು ಬಾಹಿರವಾಗಿ ಬಂಧಿಸಿ ಠಾಣೆಗೆ ಕರೆದು ದೌರ್ಜನ್ಯ ಎಸಗಿದ್ದರೆಂದು ದೂರಲಾಗಿದೆ.
ಅಲ್ಲದೆ ಅವ್ಯಾಚ್ಯ ಶಬ್ದಗಳಿಂದ ಬೈದು, ಎನ್‌ಕೌಂಟರ್ ಮಾಡುವುದಾಗಿ ಬೆದರಿಸಿ, ತನ್ನೊಪ್ಪಿಗೆ ಬರಹಕ್ಕೆ ಸಹಿ ಮಾಡಲು ನಿರಂತರವಾಗಿ ದೈಹಿಕ ಹಲ್ಲೆ ನಡೆಸಿರುವುದಾಗಿ ದೂರಲಾಗಿದೆ. ಈ ಬಗ್ಗೆ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳುವಂತೆ ಹಿದಾಯತುಲ್ಲಾ ಉಡುಪಿ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದರು. ದೂರನ್ನು ಮಾನ್ಯ ಮಾಡಿದ ನ್ಯಾಯಾಲಯ ಶಕ್ತಿವೇಲು ಮತ್ತು ವೃತ್ತ ನಿರೀಕ್ಷಕ ಶರಣಗೌಡ ವಿರುದ್ಧ ಐಪಿಸಿ ಸೆಕ್ಷನ್ 448, 452, 348, 342, 324, 325, 504, 506 23 34 803 ದಾಖಲಿಸಲು ಆದೇಶ ಜಾರಿ ಮಾಡಿದೆ.
ನಂತರ ಇವರಿಗೆ ನ್ಯಾಯಾಲಯಕ್ಕೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಲಾಗಿತ್ತು. ಆದರೆ ನ್ಯಾಯಾಲಯಕ್ಕೆ ಹಾಜರಾಗದ ನಿಮಿತ್ತ ಅವರ ವಿರುದ್ಧ ವಾರಂಟ್ ಜಾಮೀನು ರಹಿತ ವಾರಂಟ್ ಜಾರಿ ಮಾಡಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LwWxa0YtfZe3V04Rgx7ZIV
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka