ಮನುಷ್ಯರೇ ಅಲ್ಲ, ಆನೆಮರಿಗಳೂ ಅಡಗಿ ಕುಳಿತುಕೊಳ್ಳುತ್ತವೆ!

02/10/2023
ಸಾಮಾಜಿಕ ಜಾಲತಾಣಗಳಲ್ಲಿ ಫೋಟೋವೊಂದು ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಕಂಬವೊಂದರ ಹಿಂದೆ ಆನೆ ಮರಿಯೊಂದು ಅಡಗಿ ಕುಳಿತುಕೊಳ್ಳಲು ಯತ್ನಿಸುತ್ತಿರುವ ಮುದ್ದಾದ ಈ ಫೋಟೋ ನೆಟ್ಟಿಗರಿಗೆ ಬಹಳ ಇಷ್ಟವಾಗಿದೆ.
ಚಿತ್ರದಲ್ಲಿನ ಆನೆಮರಿಯು ಥಾಯ್ಲೆಂಡ್‌ನ ರೈತರೊಬ್ಬರ ಹೊಲದಲ್ಲಿ ಕಬ್ಬನ್ನು ತಿನ್ನುತ್ತಿದ್ದಾಗ ಮನುಷ್ಯರು ಸಮೀಪಿಸುತ್ತಿರುವುದನ್ನು ಕಂಡಿತು, ತಕ್ಷಣ ಕಂಬದ ಮರೆಯಲ್ಲಿ ಅವಿತುಕೊಳ್ಳುವ ಪ್ರಯತ್ನ ಮಾಡುತ್ತದೆ.
ಆದರೆ ಅದಕ್ಕೆ ತಕ್ಷಣ ಸಿಕ್ಕುದ ಕಂಬ ಚಿಕ್ಕಗಾತ್ರದಾದ ಕಾರಣ ಅದು ಅವಿತುಕೊಂಡು ಮನುಷ್ಯರ ಕಣ್ಣು ತಪ್ಪಿಸಲು ಸಾಧ್ಯವಾಗಿಲ್ಲ. ಆನೆಮರಿಯ ಈ ಮುದ್ದಾದ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.