ಅಮಾನವೀಯ ಘಟನೆ:  ನೌಕಾಪಡೆಯ ಅಧಿಕಾರಿಯನ್ನು ಜೀವಂತ ಸುಟ್ಟ ಅಪಹರಣಕಾರರು - Mahanayaka
2:16 AM Thursday 16 - October 2025

ಅಮಾನವೀಯ ಘಟನೆ:  ನೌಕಾಪಡೆಯ ಅಧಿಕಾರಿಯನ್ನು ಜೀವಂತ ಸುಟ್ಟ ಅಪಹರಣಕಾರರು

07/02/2021

ರಾಂಚಿ: ನೌಕಾಪಡೆಯ ಅಧಿಕಾರಿಯನ್ನು ಅಪಹರಿಸಿ 10 ಲಕ್ಷ ರೂಪಾಯಿಗೆ ಬೇಡಿಕೆ ಇರಿಸಿದ್ದ ಅಪಹರಣಕಾರರು, ಹಣ ನೀಡಲು ನಿರಾಕರಿಸಿದ್ದಕ್ಕೆ ಸಜೀವವಾಗಿ ಸುಟ್ಟು ಭೀಕರವಾಗಿ ಹತ್ಯೆ ಮಾಡಿದ್ದಾರೆ.


Provided by

ಜಾರ್ಖಂಡ್ ಮೂಲದ 27 ವರ್ಷದ ಸೂರಜ್ ಕುಮಾರ್ ದುಬೆ(27) ಹತ್ಯೆಗೀಡಾದ ಅಧಿಕಾರಿಯಾಗಿದ್ದಾರೆ.  ಜನವರಿ 31ರಂದು ಸೂರಜ್ ಅವರನ್ನು ಮೂವರು ಅಪಹರಣಕಾರರು ಅಪಹರಿಸಿದ್ದರು.  ಬಳಿಕ ಮೂರು ದಿನಗಳ ಕಾಲ ಚೆನ್ನೈನ ಅಜ್ಞಾತ ಸ್ಥಳದಲ್ಲಿರಿಸಿದ್ದರು.

ಫೆ.5ರಂದು  ಗುಜರಾತ್ ಗಡಿಯ ಪಶ್ಚಿಮ ಘಟ್ಟ ವ್ಯಾಪ್ತಿಯ ವೇವ್ ಜಿ ಗ್ರಾಮದ ಸಮೀಪದ ಅರಣ್ಯಕ್ಕೆ ಕರೆತಂದಿದ್ದ ಅಪಹರಣಕಾರರು ಜೀವಂತವಾಗಿ ಸುಟ್ಟಿದ್ದಾರೆ. ಮಧ್ಯಾಹ್ನದ ವೇಳೆ ಇಲ್ಲಿನ ಸ್ಥಳೀಯರು, ಸೂರಜ್ ಕುಮಾರ್ ಸಾವು ಬದುಕಿನ ನಡುವೆ ಹೋರಾಡುವುದನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಸೂರಜ್ ಅವರನ್ನು ಮೊದಲು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ  ಹೆಚ್ಚಿನ ಚಿಕಿತ್ಸೆಗಾಗಿ ಮುಂಬೈ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅವರು ಅಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಈ ಪ್ರಕರಣ ಸಂಬಂಧ ಅಪರಿಚಿತ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡಸಲಾಗುತ್ತಿದೆ ಎಂದು ಪಾಲ್ಗಾರ್ ಎಸ್ಪಿ ದತ್ತಾತ್ರೇಯ ಶಿಂಧೆ ಹೇಳಿದ್ದಾರೆ.

ಇತ್ತೀಚಿನ ಸುದ್ದಿ