ವಿದ್ಯಾರ್ಥಿ ವೇತನ ಸ್ಥಗಿತ, ಫಲಿತಾಂಶ ವಿಳಂಬ ವಿರುದ್ಧ ಎನ್‌ ಎಸ್‌ ಯುಐ ಪ್ರತಿಭಟನೆ - Mahanayaka

ವಿದ್ಯಾರ್ಥಿ ವೇತನ ಸ್ಥಗಿತ, ಫಲಿತಾಂಶ ವಿಳಂಬ ವಿರುದ್ಧ ಎನ್‌ ಎಸ್‌ ಯುಐ ಪ್ರತಿಭಟನೆ

nsui
17/12/2022

ವಿದ್ಯಾರ್ಥಿ ವೇತನ ಸ್ಥಗಿತ, ವಿವಿಯಿಂದ ಫಲಿತಾಂಶ ಪ್ರಕಟ ವಿಳಂಬ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಎನ್‌ ಎಸ್‌ ಯುಐ ವತಿಯಿಂದ ಇಂದು  ಮಂಗಳೂರಲ್ಲಿ ಧರಣಿ ನಡೆಯಿತು.

ಮಂಗಳೂರು ನಗರದ ಮಿನಿ ವಿಧಾನ ಸೌಧದ ಎದುರು ಸೇರಿದ್ದ ಎನ್‌ ಎಸ್‌ ಯುಐ ಪದಾಧಿಕಾರಿಗಳು ತಮ್ಮ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಸ್ತೆ ತಡೆ ನಡೆಸಲು ಮುಂದಾಗುತ್ತಿದ್ದಂತೆಯೇ ಅಲ್ಲಿದ್ದ ಪೊಲೀಸರು ಅವರನ್ನು ವಶಕ್ಕೆ ಪಡೆದರು. ಧರಣಿನಿರತರು ಬಿಜೆಪಿ ವಿರುದ್ಧ ಘೋಷಣೆಗಳನ್ನು ಕೂಗಿದರು.

ಎನ್‌ ಎಸ್‌ ಯುಐ ದ.ಕ. ಜಿಲ್ಲಾಧ್ಯಕ್ಷ ಸವಾದ್ ಸುಳ್ಯ, ರಾಜ್ಯ ಉಪಾಧ್ಯಕ್ಷ ಸುಹಾನ್ ಆಳ್ವ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಫ್ವಾನ್, ಮುಖಂಡರಾದ ಸೋಹನ್ ಸಿರಿ, ಓಂಶ್ರೀ, ಸಿರಾಜ್, ಅಝೀಮ್, ನಿಖಿಲ್, ಸಾಹಿಲ್ ಮೊದಲಾದವರು ಉಪಸ್ಥಿತರಿದ್ದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LwWxa0YtfZe3V04Rgx7ZIV

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ