ಶಾಖಾದ್ರಿ ಮನೆಯಲ್ಲಿ ಪ್ರಾಣಿಯ ಚರ್ಮ ಪತ್ತೆ: ಮನೆಗೆ ಪ್ರವೇಶಿಸಿ ತಪಾಸಣೆ ನಡೆಸಿದ ಅಧಿಕಾರಿಗಳು - Mahanayaka

ಶಾಖಾದ್ರಿ ಮನೆಯಲ್ಲಿ ಪ್ರಾಣಿಯ ಚರ್ಮ ಪತ್ತೆ: ಮನೆಗೆ ಪ್ರವೇಶಿಸಿ ತಪಾಸಣೆ ನಡೆಸಿದ ಅಧಿಕಾರಿಗಳು

khadri
27/10/2023


Provided by

ಚಿಕ್ಕಮಗಳೂರು: ಶಾಖಾದ್ರಿ ಹುಲಿ ಚರ್ಮದ ಮೇಲೆ ಕುಳಿತಿರುವ ಪೋಟೋ ವೈರಲ್ ಹಿನ್ನೆಲೆ ಶಾಖಾದ್ರಿ ಮನೆಗೆ ಅರಣ್ಯಾಧಿಕಾರಿಗಳ ತಂಡ ಭೇಟಿ ನೀಡಿದೆ. ಇದೀಗ ಶಾಖಾದ್ರಿ ಮನೆಯನ್ನ ಅರಣ್ಯಾಧಿಕಾರಿಗಳು ತಪಾಸಣೆ ನಡೆಸಿದ್ದಾರೆ.

ಸದ್ಯದ ಮಾಹಿತಿಗಳ ಪ್ರಕಾರ ಚಿರತೆ ಹಾಗೂ ಜಿಂಕೆ ಚರ್ಮ ಪತ್ತೆಯಾಗಿದೆ ಎನ್ನಲಾಗ್ತಿದೆ. ಅರಣ್ಯಾಧಿಕಾರಿಗಳು ಇನ್ನೂ ಕೂಡ ಶಾಖಾದ್ರಿ ಮನೆಯಲ್ಲಿ ತಪಾಸಣೆ ನಡೆಸಿದ್ದಾರೆ

ಎರಡು ಪ್ರಾಣಿಯ ಚರ್ಮವನ್ನ ವಶಕ್ಕೆ ಪಡೆದ ಅಧಿಕಾರಿಗಳು, ಎಫ್.ಎಸ್.ಎಲ್. ವರದಿಗೆ ಕಳುಹಿಸಲಿದ್ದಾರೆ.  ನಗರದ ಮಾರ್ಕೆಟ್ ರಸ್ತೆಯಲ್ಲಿ ಇರುವ ಇನಾಂ ದತ್ತಾತ್ರೇಯ ಬಾಬಾಬುಡನ್ ಗಿರಿ ಸ್ವಾಮಿ ದರ್ಗಾ ದೇವಸ್ಥಾನದ ಅರ್ಚಕರ ಶಾಖಾದ್ರಿ ನಿವಾಸ ಮಾರ್ಕೆಟ್ ರಸ್ತೆಯಲ್ಲಿರುವ ಶಾಖಾದ್ರಿ ಸೈಯದ್ ಗೌಸ್ ಮೋಯಿದ್ದೀನ್ ನಿವಾಸದಲ್ಲಿ ಅರಣ್ಯಾಧಿಕಾರಿಗಳು ತಪಾಸಣೆ ನಡೆಸುತ್ತಿದ್ದಾರೆ.

ವಿಡಿಯೋ ನೋಡಿ:

ಇತ್ತೀಚಿನ ಸುದ್ದಿ