ಹುಟ್ಟುಹಬ್ಬದ ದಿನ ಅಭಿಮಾನಿಗಳು ನೀಡಿದ ದಿನಸಿ ಸಾಮಗ್ರಿಗಳನ್ನು ಸ್ವಚ್ಛತಾ ಸೇನಾನಿಗಳಿಗೆ ಹಂಚಿದ ದರ್ಶನ್

24/02/2024
ತನ್ನ ಹುಟ್ಟು ಹಬ್ಬಕ್ಕೆ ಅಭಿಮಾನಿಗಳು ಕೊಡುಗೆಯಾಗಿ ನೀಡಿದ ದಿನಸಿ ಸಾಮಗ್ರಿಗಳನ್ನು ಸ್ವಚ್ಛತಾ ಸೇನಾನಿಗಳಾದ ಪೌರಕಾರ್ಮಿಕರಿಗೆ ನಟ ದರ್ಶನ್ ಅವರು ವಿತರಣೆ ಮಾಡಿದ್ದಾರೆ.
ಈ ಹಿಂದೆ ದರ್ಶನ್ ಅವರು ತಮ್ಮ ಹುಟ್ಟು ಹಬ್ಬದ ದಿನ ಅಭಿಮಾನಿಗಳು ನೀಡಿದ ದಿನಸಿ ಸಾಮಗ್ರಿಗಳನ್ನು ಸಿದ್ದಗಂಗಾ ಮಠ ಹಾಗೂ ಅನಾಥಾಶ್ರಮಗಳಿಗೆ ನೀಡಿದ್ದರು. ಬಾರಿ ಸ್ವಚ್ಛತಾ ಸೇನಾನಿಗಳಾದ ಪೌರಕಾರ್ಮಿಕರಿಗೆ ಹಂಚಿದ್ದಾರೆ.
ಹುಟ್ಟುಹಬ್ಬದ ದಿನ ಅಭಿಮಾನಿಗಳು ಹಾರ, ಕೇಕ್, ತುರಾಯಿ ನೀಡದೇ ದಿನಸಿ ಸಾಮಗ್ರಿಗಳನ್ನು ನೀಡುವಂತೆ ದರ್ಶನ್ ಮನವಿ ಮಾಡಿದ್ದರು. ಅಭಿಮಾನಿಗಳು ನೀಡಿದ ಕೊಡುಗೆಯನ್ನು ಸಾರ್ವಜನಿಕರ ಹಿತಕ್ಕಾಗಿ ದರ್ಶನ್ ಬಳಸುತ್ತಿರುವುದು ಮಾದರಿಯಾಗಿದೆ.
ದರ್ಶನ್ ಅವರ ಇತ್ತೀಚೆಗೆ ಬಿಡುಗಡೆಯಾಗಿರುವ ಕಾಟೇರ ಚಿತ್ರ ಭರ್ಜರಿ ಯಶಸ್ಸು ಕಂಡಿತ್ತು. ಕನ್ನಡ ಚಿತ್ರರಂಗದಲ್ಲಿ ಈ ಚಿತ್ರ ಹೊಸತೊಂದು ದಾಖಲೆಯನ್ನು ಬರೆದಿದೆ.