ವನ್ ಪ್ಲಸ್  ಮೊಬೈಲ್ ಬ್ಲಾಸ್ಟ್: ಯುವಕನ ತೊಡೆಗೆ ಗಂಭೀರ ಗಾಯ - Mahanayaka

ವನ್ ಪ್ಲಸ್  ಮೊಬೈಲ್ ಬ್ಲಾಸ್ಟ್: ಯುವಕನ ತೊಡೆಗೆ ಗಂಭೀರ ಗಾಯ

one plus mobile
05/01/2024


Provided by

ಬೆಂಗಳೂರು: 20 ಸಾವಿರ ರೂಪಾಯಿ ಬೆಲೆಯ ಮೊಬೈಲ್ ವೊಂದು ಬ್ಲಾಸ್ಟ್ ಆದ ಪರಿಣಾಮ ಯುವಕನಿಗೆ ಗಂಭೀರವಾಗಿ ಗಾಯವಾಗಿದ್ದು, ಇದೀಗ ಯುವಕನ ಚಿಕಿತ್ಸೆಗೆ ಲಕ್ಷಾಂತರ ರೂಪಾಯಿ ಹಣ ಖರ್ಚಾಗಿದೆ.

ಬೆಂಗಳೂರಿನ ವೈಟ್‌’ಫೀಲ್ಡ್‌ ವಾಸವಿರುವ ಯುವಕನೋರ್ವ ಅಕ್ಟೋಬರ್ ನಲ್ಲಿ ಹೊಸ ವನ್ ಪ್ಲಸ್ ಮೊಬೈಲ್ ನ್ನು 20 ಸಾವಿರ ರೂಪಾಯಿ ಹಣ ನೀಡಿ ಖರೀದಿಸಿದ್ದರು.

ಈ ಮೊಬೈಲ್ ಜೇಬಿನಲ್ಲಿದ್ದ ಸಂದರ್ಭದಲ್ಲಿ ಬ್ಲಾಸ್ಟ್ ಆಗಿದ್ದು, ಯುವಕ ತೊಡೆಗೆ ದೊಡ್ಡ ಗಾಯವಾಗಿದೆ. ಈ ಗಾಯದ ಸರ್ಜರಿಗೆ ಸುಮಾರು 4 ಲಕ್ಷ ರೂಪಾಯಿ ಖರ್ಚಾಗುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ.

ತನ್ನ ಆವಶ್ಯಕತೆಗಾಗಿ ತೆಗೆದುಕೊಂಡಿದ್ದ ಹೊಸ ಮೊಬೈಲ್ ಫೋನ್ ಇದೀಗ ಯುವಕನಿಗೆ ಸಂಕಷ್ಟವನ್ನು ತಂದೊಡ್ಡಿದೆ. ಮೊಬೈಲ್ ಬ್ಲಾಸ್ಟ್ ಆಗಿರೋದೇ ಅಲ್ಲದೇ ಲಕ್ಷಾಂತರ ಹಣವನ್ನು ಚಿಕಿತ್ಸೆಗೆ ವ್ಯಯಿಸಬೇಕಾದ ಸಂದರ್ಭ ಎದುರಾಗಿದೆ.

ಇತ್ತೀಚೆಗಿನ ದಿನಗಳಲ್ಲಿ ಮೊಬೈಲ್ ಗಳ ಗುಣಮಟ್ಟದ ಬಗ್ಗೆ ಸಾಕಷ್ಟು ದೂರುಗಳು ಕೇಳಿ ಬರುತ್ತಿವೆ. ಜನಪ್ರಿಯ ಕಂಪೆನಿಗಳು ಅಂತ ಜನ ವಿಶ್ವಾಸದಿಂದ ಮೊಬೈಲ್ ಖರೀದಿ ಮಾಡ್ತಾರೆ. ಆದ್ರೆ ಈ ರೀತಿಯ ಘಟನೆಗಳು ನಡೆದರೆ, ಜನರು ಇಂತಹ ದೊಡ್ಡ ಕಂಪೆನಿಗಳನ್ನು ಹೇಗೆ ನಂಬಬೇಕು ಅನ್ನೋ ಪ್ರಶ್ನೆಗಳು ಕೇಳಿ ಬಂದಿವೆ.

ಇತ್ತೀಚಿನ ಸುದ್ದಿ