ಕುಂಕುಮ ಹಚ್ಚಿಕೊಳ್ಳಲು ನಿರಾಕರಿಸಿದ ವಿಪಕ್ಷ ನಾಯಕ ಆರ್.ಅಶೋಕ್

ಕಲಬುರಗಿ: ಬಿಜೆಪಿ ಕಚೇರಿ ಉದ್ಘಾಟನಾ ಕಾರ್ಯಕ್ರಮದ ವೇಳೆ ವಿಪಕ್ಷ ನಾಯಕ ಆರ್.ಅಶೋಕ್ ಕುಂಕುಮ ಹಚ್ಚಿಕೊಳ್ಳಲು ನಿರಾಕರಿಸಿದ ಘಟನೆ ನಡೆಯಿತು.
ಚಿಂಚೋಳಿ ತಾಲೂಕಿನ ಸುಲೇಪೇಟ್ ಗ್ರಾಮದಲ್ಲಿ ಬಿಜೆಪಿ ಕಚೇರಿ ಉದ್ಘಾಟನೆ ವೇಳೆ ಈ ಘಟನೆ ನಡೆದಿದೆ.
ಕಚೇರಿಗೆ ಆಗಮಿಸಿದ ಆರ್.ಅಶೋಕ್ ಅವರಿಗೆ ಕಾರ್ಯಕರ್ತರು ಅದ್ದೂರಿಯಾಗಿ ಸ್ವಾಗತಿಸಿದರು. ಶಾಲು ಹಾಕಿ ಬರಮಾಡಿಕೊಂಡರು. ಕಾರ್ಯಕರ್ತರೊಬ್ಬರು ಹಾರ ಹಾಕಲು ಯತ್ನಿಸಿದಾಗ ಹಾರ ಕೈಯಲ್ಲಿ ಹಿಡಿದುಕೊಂಡು ಹಿರಿಯ ಮುಖಂಡ ಡಾ.ವಿಶ್ವನಾಥ್ ಪವಾರ್ ಅವರಿಗೆ ಹಾಕಿದರು.
ಇದೇ ವೇಳೆ ವಿಶ್ವನಾಥ್ ಅವರು ಅಶೋಕ ಅವರಿಗೆ ಕುಂಕುಮದ ತಿಲಕ ಹಚ್ಚಲು ಮುಂದಾದಾಗ ಹಿಂದೆ ಸರಿದ ಅಶೋಕ್ ಬೇಡ ಎಂದು ಕೈಯಿಂದ ತಡೆದರು. ಈ ವೇಳೆ ಶಾಸಕ ಡಾ. ಅವಿನಾಶ್ ಜಾಧವ್ ಮತ್ತಿತರ ಮುಖಂಡರಿದ್ದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth