ಯುಪಿಯಲ್ಲಿ ನೂರಕ್ಕಿಂತಲೂ ಅಧಿಕ ಮುಸ್ಲಿಂ ಕುಟುಂಬಗಳಿಗೆ ಮನೆ ತೆರವು ನೋಟಿಸ್ ಜಾರಿ

ಉತ್ತರ ಪ್ರದೇಶದ ಅಲೀ ಗಡ್ ಜಿಲ್ಲೆಯ ಚಿಲ್ಕೋರ ಗ್ರಾಮದ ನೂರಕ್ಕಿಂತಲೂ ಅಧಿಕ ಮುಸ್ಲಿಂ ಕುಟುಂಬಗಳಿಗೆ ಮನೆ ತೆರವು ನೋಟಿಸ್
ನೀಡಲಾಗಿದೆ. ಈದ್ ನ ಬಳಿಕ 15 ದಿನಗಳೊಳಗೆ ಮನೆಯಿಂದ ಹೊರ ಹೋಗದಿದ್ದರೆ ಮನೆಯನ್ನು ದ್ವoಸಗೊಳಿಸಲಾಗುವುದು ಎಂದು ನೋಟಿಸ್ ನಲ್ಲಿ ತಿಳಿಸಲಾಗಿದೆ.
ಈದ್ ಗಿಂತ ದಿನಗಳ ಮೊದಲು ಅಧಿಕಾರಿಗಳು ಈ ನೋಟಿಸ್ ಜಾರಿ ಮಾಡಿದ್ದಾರೆ. ಈ ಮೂಲಕ ಈದ್ ಆಚರಣೆಯ ಮೇಲೆ ಕರಿ ನೆರಳು ಬಿದ್ದಿದೆ. ಆದರೆ ಈ ನೋಟಿಸಿಗೆ ಆಧಾರವೇನು ಅನ್ನುವುದನ್ನು ಅಧಿಕಾರಿಗಳು ಬಹಿರಂಗಪಡಿಸಿಲ್ಲ.
ಇದೇ ವೇಳೆ ನೋಟಿಸು ಪಡೆದ ನಾಗರಿಕರು ಜಿಲ್ಲಾಧಿಕಾರಿಯನ್ನು ಭೇಟಿಯಾಗಿದ್ದಾರೆ. ದಶಕಗಳಿಗಿಂತಲೂ ಅಧಿಕ ಸಮಯದಿಂದ ಇಲ್ಲಿ ತಾವು ವಾಸವಾಗಿರುವುದನ್ನು ಮತ್ತು ಅದಕ್ಕೆ ಇರುವ ದಾಖಲೆಯನ್ನು ಜಿಲ್ಲಾಧಿಕಾರಿಗೆ ಒಪ್ಪಿಸಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj