ದಾಳಿ: ಅಗರ್ತಲಾ ರೈಲಲ್ಲಿ 30 ಕೆಜಿ ಗಾಂಜಾ ವಶ, ಓರ್ವನ ಬಂಧನ

27/06/2024
ನೈಋತ್ಯ ರೈಲ್ವೆ ಪೊಲೀಸರು ಬೆಂಗಳೂರಿನ ಅಗರ್ತಲಾ-ಎಸ್ಎಂವಿಟಿ ಎಕ್ಸ್ ಪ್ರೆಸ್ (ರೈಲು ಸಂಖ್ಯೆ 12504) ನಲ್ಲಿ ಒಟ್ಟು 32.888 ಕೆಜಿ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.
ರೈಲ್ವೆಗೆ ಸಂಬಂಧಿಸಿದ ಗುತ್ತಿಗೆ ಕಾರ್ಮಿಕ ಬಳಸುವ ಬೆಡ್ ರೋಲರ್ ನಲ್ಲಿ ನಿಷಿದ್ಧ ವಸ್ತುಗಳನ್ನು ಅಡಗಿಸಿಡಲಾಗಿತ್ತು.
ತ್ರಿಪುರಾದ ಶೆಪೈಜಾಲ್ ಜಿಲ್ಲೆಯ ಪಾಂಡಬ್ಪುರ ಗ್ರಾಮದ ದುಖೈ ದಾಸ್ ಅವರ ಪುತ್ರ ದೀಪನ್ ದಾಸ್ (20) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ತ್ರಿಪುರಾದ ಸುಮನ್ ಮತ್ತು ಬೆಂಗಳೂರಿನ ಬಿಸ್ವಜಿತ್ ಪರಾರಿಯಾಗಿದ್ದಾರೆ. ಬೈಯಪ್ಪನಹಳ್ಳಿಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth