ಇಸ್ರೇಲ್ ಹಮಾಸ್ ಸಂಘರ್ಷ: ಗಾಝಾದ ಆಸ್ಪತ್ರೆಗಳಲ್ಲಿ ಗಾಯಾಳುಗಳ ಸಂಖ್ಯೆ ಹೆಚ್ಚಳ; ಮೂಲಭೂತ ಸಾಮಾಗ್ರಿಗಳ ಕೊರತೆಯಿಂದ ಸಾವು ಹೆಚ್ಚಾಗಬಹುದೆಂದು ಹೇಳಿದ ವೈದ್ಯರು

ಇಸ್ರೇಲ್-ಫೆಲೆಸ್ತೀನ್ ಯುದ್ದದಲ್ಲಿ ಜೀವಗಳ ಹರಣ ಆಗುತ್ತಿದೆ. ಗಾಝಾದಲ್ಲಿರುವ ಆಸ್ಪತ್ರೆಗಳಲ್ಲಿ ಗಾಯಾಳುಗಳ ಸಂಖ್ಯೆ ಹೆಚ್ಚಳ ಆಗುತ್ತುದ್ದು, ಈ ಮಧ್ಯೆ ಗಾಝಾದ ವೈದ್ಯರು ಎಚ್ಚರಿಕೆಯೊಂದನ್ನು ನೀಡಿದ್ದಾರೆ. ಗಾಯಗೊಂಡ ಜನರಿಂದ ತುಂಬಿರುವ ಆಸ್ಪತ್ರೆಗಳಲ್ಲಿ ಇಂಧನ ಮತ್ತು ಮೂಲಭೂತ ಸಾಮಾಗ್ರಿಗಳ ತೀವ್ರ ಕೊರತೆ ಇರುವುದರಿಂದ ಸಾವಿರಾರು ಜನರು ಸಾಯಬಹುದು ಎಂದು ಎಚ್ಚರಿಸಿದ್ದಾರೆ.
ಹಮಾಸ್ ನ ಮಾರಣಾಂತಿಕ ದಾಳಿಯಿಂದ ಪ್ರಚೋದಿಸಲ್ಪಟ್ಟ ಯುದ್ಧದಲ್ಲಿ ಇಸ್ರೇಲಿ ಆಕ್ರಮಣಕ್ಕೆ ಮುಂಚಿತವಾಗಿ ಮುತ್ತಿಗೆ ಹಾಕಿದ ಕರಾವಳಿ ಪ್ರದೇಶದಲ್ಲಿನ ಫೆಲೆಸ್ತೀನೀಯರು ಆಹಾರ, ನೀರು ಮತ್ತು ಸುರಕ್ಷತೆಯನ್ನು ಹುಡುಕಲು ಹೆಣಗಾಡಿದರು. ಈ ಪ್ರದೇಶದಲ್ಲಿ ಹೆಚ್ಚುತ್ತಿರುವ ಯುಎಸ್ ಯುದ್ಧನೌಕೆಗಳ ನಿಯೋಜನೆಯ ಬೆಂಬಲದೊಂದಿಗೆ ಇಸ್ರೇಲಿ ಪಡೆಗಳು ಗಾಝಾದ ಗಡಿಯುದ್ದಕ್ಕೂ ತಮ್ಮನ್ನು ತಾವು ಸ್ಥಾಪಿಸಿಕೊಂಡು ದಾಳಿ ನಡೆಸುತ್ತಿದೆ. ಒಂದು ವಾರದಿಂದ ಆಗುತ್ತಿರುವ ವೈಮಾನಿಕ ದಾಳಿಗಳು ಇಡೀ ನೆರೆಹೊರೆಯ ಪ್ರದೇಶಗಳನ್ನು ನೆಲಸಮಗೊಳಿಸಿವೆ. ಆದರೆ ಇಸ್ರೇಲ್ ಮೇಲೆ ಉಗ್ರಗಾಮಿಗಳ ರಾಕೆಟ್ ದಾಳಿಯನ್ನು ತಡೆಯಲು ವಿಫಲವಾಗಿವೆ.
ಗಾಝಾ ಆರೋಗ್ಯ ಸಚಿವಾಲಯದ ಪ್ರಕಾರ, ಸಂಘರ್ಷ ಭುಗಿಲೆದ್ದಾಗಿನಿಂದ 2,329 ಫೆಲೆಸ್ತೀನೀಯರು ಸಾವನ್ನಪ್ಪಿದ್ದಾರೆ. ಇದು ಆರು ವಾರಗಳ ಕಾಲ ನಡೆದ 2014 ರ ಗಾಝಾ ಯುದ್ಧಕ್ಕಿಂತ ಹೆಚ್ಚಾಗಿದೆ. ಇದು ಎರಡೂ ಕಡೆಯ ಐದು ಗಾಝಾ ಯುದ್ಧಗಳಲ್ಲಿ ಅತ್ಯಂತ ಮಾರಕವಾಗಿದೆ.
ಅಕ್ಟೋಬರ್ 7 ರಂದು ಹಮಾಸ್ ನಡೆಸಿದ ದಾಳಿಯಲ್ಲಿ 1,300 ಕ್ಕೂ ಹೆಚ್ಚು ಇಸ್ರೇಲಿಗಳು ಸಾವನ್ನಪ್ಪಿದ್ದಾರೆ. ಇವರಲ್ಲಿ ಹೆಚ್ಚಿನವರು ನಾಗರಿಕರು. ಮಕ್ಕಳು ಸೇರಿದಂತೆ ಅಂದಾಜು 150 ಮಂದಿಯನ್ನು ಹಮಾಸ್ ಸೆರೆಹಿಡಿದು ಗಾಝಾಕ್ಕೆ ಕರೆದೊಯ್ಯಿತು. ಈಜಿಪ್ಟ್ ಮತ್ತು ಸಿರಿಯಾದೊಂದಿಗೆ 1973 ರ ಸಂಘರ್ಷದ ನಂತರ ಇಸ್ರೇಲ್ ಗೆ ಇದು ಮಾರಣಾಂತಿಕ ಯುದ್ಧವಾಗಿದೆ.