ಜಮ್ಮು ಗಡಿಯಲ್ಲಿ ಪಾಕ್ ನ ವಿಮಾನ ಆಕಾರದ ಬಲೂನ್ ಪ್ರತ್ಯಕ್ಷ: ತೀವ್ರ ಶೋಧ - Mahanayaka

ಜಮ್ಮು ಗಡಿಯಲ್ಲಿ ಪಾಕ್ ನ ವಿಮಾನ ಆಕಾರದ ಬಲೂನ್ ಪ್ರತ್ಯಕ್ಷ: ತೀವ್ರ ಶೋಧ

10/06/2023

ಜಮ್ಮು ಮತ್ತು ಕಾಶ್ಮೀರದ ಗಡಿಯಲ್ಲಿ ಪಾಕಿಸ್ತಾನ ಇಂಟರ್​​ನ್ಯಾಷನಲ್​ ಏರ್​ಲೈನ್ಸ್​ ಲೋಗೋ ಇರುವ ವಿಮಾನ ಆಕಾರದ ನಿಗೂಢ ಬಲೂನ್ ವೊಂದು ಪತ್ತೆಯಾಗಿದೆ.

ಕಥುವಾ ಜಿಲ್ಲೆ ಹೀರಾನಗರದ ಬಳಿ ಬಿದ್ದಿರುವ ಕಪ್ಪು-ಬಿಳಿ ಬಣ್ಣದ ನಿಗೂಢ ಬಲೂನನ್ನು ಬಿಎಸ್​ಎಫ್ ಯೋಧರು ವಶಪಡಿಸಿಕೊಂಡು ಇದರ ಮೂಲವನ್ನು ಪತ್ತೆ ಹಚ್ಚಲು ತನಿಖೆ ಆರಂಭಿಸಿದ್ದಾರೆ. ಈ ಹಿಂದೆ ಕೂಡ ಇದೇ ರೀತಿಯಾಗಿ 2023ರ ಫೆಬ್ರವರಿಯಲ್ಲಿ ಪಾಕಿಸ್ತಾನ ಇಂಟರ್​​ನ್ಯಾಷನಲ್​ ಏರ್​ಲೈನ್ಸ್​ ಲೋಗೋ ವಿಮಾನ ಆಕಾರದ ಹಸಿರು ಮತ್ತು ಬಿಳಿ ಬಲೂನ್ ಶಿಮ್ಲಾದ ಸೇಬಿನ ತೋಟದಲ್ಲಿ ಪತ್ತೆಯಾಗಿತ್ತು. ಈ ಮೂಲಕ ಇದೀಗ ಮತ್ತೆ ಎರಡನೇ ಬಾರಿಗೆ ಪತ್ತೆಯಾಗಿದೆ.

ಮೇ 20 ರಂದು ಅಮೃತಸರದಲ್ಲಿ ಪಾಕಿಸ್ತಾನದ ಡ್ರೋನ್​ಅನ್ನು ಸೇನೆ ಹೊಡೆದುರುಳಿಸಿತ್ತು. ಈ ವೇಳೆ ಶಂಕಿತ ಮಾದಕವಸ್ತುಗಳನ್ನು ಹೊಂದಿರುವ ಚೀಲವನ್ನು ವಶಪಡಿಸಿಕೊಂಡಿರುವುದಾಗಿ ಗಡಿ ಭದ್ರತಾ ಪಡೆ (ಬಿಎಸ್ಎಫ್) ಸಿಬ್ಬಂದಿ ತಿಳಿಸಿದ್ದರು. ಇದರ ಹಿಂದಿನ ದಿನ, ಪಂಜಾಬ್‌ನ ಅಂತರರಾಷ್ಟ್ರೀಯ ಗಡಿಯಲ್ಲಿ ಮೂರು ಪಾಕಿಸ್ತಾನಿ ಡ್ರೋನ್‌ಗಳನ್ನು ಬಿಎಸ್​ಎಫ್​​ ಹೊಡೆದುರುಳಿಸಿತ್ತು. ಇದೀಗ ಸಿಕ್ಕಿರುವ ನಿಗೂಢ ಬಲೂನ್ ಅನೇಕ ಪ್ರಶ್ನೆಗಳನ್ನು ಹುಟ್ಟು ಹಾಕಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

Disclaimer:

www.mahanayaka.in ಅಂತರ್ಜಾಲ ಮಾಧ್ಯಮದಲ್ಲಿ ಪ್ರಕಟವಾದ ಸುದ್ದಿಗಳಲ್ಲಿ ಯಾರದ್ದೇ ಭಾವನೆಗಳಿಗೆ ಧಕ್ಕೆಯಾಗುವಂತಹ ಅಥವಾ ನೋವುಂಟಾಗುವಂತಹ ಅಥವಾ ನಿಮಗೆ ಆಕ್ಷೇಪಾರ್ಹ ಎನಿಸಿದಂತಹ ಅಂಶಗಳ ಬಗ್ಗೆ ಓದುಗರು 9686872149 ನಂಬರ್ ಗೆ ಸುದ್ದಿಯ ಲಿಂಕ್ ಸಹಿತ ನಿಮ್ಮ ದೂರು ಸಲಹೆಗಳನ್ನು ವಾಟ್ಸಾಪ್ ಮಾಡಬಹುದು. ಅಥವಾ ಕರೆ ಮಾಡಬಹುದು. ನಿಮ್ಮ ದೂರನ್ನು ಪರಿಶೀಲಿಸಿ, ಅಂತಹ ಆಕ್ಷೇಪಾರ್ಹ ಅಂಶಗಳನ್ನು ತೆಗೆದು ಹಾಕಲು ಮಾಧ್ಯಮವು ಬದ್ಧವಾಗಿದೆ.

ಇತ್ತೀಚಿನ ಸುದ್ದಿ