ಸುಳ್ಯದಲ್ಲಿ ಫುಟ್ಪಾತ್ ಗಳಲ್ಲೇ ವಾಹನ ನಿಲುಗಡೆ: ಜನ ರಸ್ತೆಯಲ್ಲಿ ನಡೆಯಬೇಕು!

ಸುಳ್ಯ: ನಗರದಲ್ಲಿ ಪಾದಚಾರಿಗಳಿಗಾಗಿ ನಿರ್ಮಿಸಲಾಗಿರುವ ಫುಟ್ಪಾತ್ ಅವ್ಯವಸ್ಥೆಯಿಂದ ಕೂಡಿದೆ. ಇನ್ನೊಂದೆಡೆ ಸರಿಯಾದ ಪಾರ್ಕಿಂಗ್ ವ್ಯವಸ್ಥೆಗಳಿಲ್ಲದೇ ಫುಟ್ಪಾತ್ ಗಳಲ್ಲೇ ವಾಹನಗಳನ್ನು ಪಾರ್ಕ್ ಮಾಡಲಾಗುತ್ತಿದೆ ಎಂದು ಸತೀಶ್ ಬೂಡುಮಕ್ಕಿ ಸುಳ್ಯ ತಿಳಿಸಿದ್ದಾರೆ.
ಫುಟ್ಪಾತ್ ಗಳು ಕೂಡ ವಾಹನ ನಿಲುಗಡೆಯ ನಿಲ್ದಾಣವಾಗಿ ಪರಿಣಮಿಸಿದೆ. ಫುಟ್ಪಾತ್ ಗಳಲ್ಲೇ ವಾಹನಗಳನ್ನು ನಿಲ್ಲಿಸಿದರೆ ಜನರು ಎಲ್ಲಿಂದ ನಡೆದುಕೊಂಡು ಹೋಗಬೇಕು ಎನ್ನುವುದು ಇದೀಗ ಪ್ರಶ್ನೆಯಾಗಿದೆ ಎಂದು ಅವರು ಅಧಿಕಾರಿಗಳನ್ನು ಪ್ರಶ್ನಿಸಿದ್ದಾರೆ.
ಈ ಘಟನೆಗೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣವಾಗಿದೆ. ದಿನನಿತ್ಯ ಫುಟ್ಪಾತ್ ಮೇಲೆ ವಾಹನಗಳನ್ನು ಅಲ್ಲಲ್ಲಿ ಅಡ್ಡವಾಗಿ ನಿಲ್ಲಿಸಲಾಗುತ್ತಿದೆ. ಇದರಿಂದಾಗಿ ರಸ್ತೆಯಲ್ಲೇ ಜನರು ರಸ್ತೆಯಲ್ಲೇ ನಡೆದಾಡಬೇಕಿದೆ. ಭಾರೀ ವಾಹನಗಳು ರಸ್ತೆಯಲ್ಲಿ ಸಂಚರಿಸುತ್ತಿರುವ ವೇಳೆ ಸಾರ್ವಜನಿಕರು ಅಪಾಯಕ್ಕೀಡಾಗುವ ಸಾಧ್ಯತೆಗಳು ಕಂಡು ಬರುತ್ತಿದ್ದು, ಯಾವುದೇ ಅನಾಹುತಗಳು ನಡೆಯುವುದಕ್ಕೂ ಮೊದಲೇ ತಕ್ಷಣವೇ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth