ಪತಿಯ ಎರಡನೇ ಮದುವೆಯನ್ನು ತಡೆದ ಪತ್ನಿ: ಪತ್ನಿ ಇರುವಾಗಲೇ ಇನ್ನೊಬ್ಬಳ ಕೈ ಹಿಡಿಯಲು ಯತ್ನ - Mahanayaka
12:19 PM Tuesday 21 - October 2025

ಪತಿಯ ಎರಡನೇ ಮದುವೆಯನ್ನು ತಡೆದ ಪತ್ನಿ: ಪತ್ನಿ ಇರುವಾಗಲೇ ಇನ್ನೊಬ್ಬಳ ಕೈ ಹಿಡಿಯಲು ಯತ್ನ

belagavi
29/03/2021

ಧಾರವಾಡ:  ಮೊದಲ ಪತ್ನಿ ಇರುವಾಗಲೇ ಎರಡನೇ ಮದುವೆಗೆ ಪತಿ ಯತ್ನಿಸಿದ್ದು, ಈ ಸಂದರ್ಭ ಮಧ್ಯಪ್ರವೇಶಿಸಿದ ಮೊದಲನೆ ಪತ್ನಿ ಮದುವೆಯನ್ನು ಮುರಿದು ಹಾಕಿರುವ ಘಟನೆ ಧಾರವಾಡ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿರುವ ದರ್ಗಾದಲ್ಲಿ ನಡೆದಿದೆ.

ಬೆಳಗಾವಿ ಜಿಲ್ಲೆ ಚಿತ್ತೂರ ಮೂಲದ ಡ್ಯಾನಿಷ್ ಎರಡನೇ ಮದುವೆಯಾಗಲು ಮುಂದಾಗಿದ್ದಾನೆ. ಈತನಿಗೆ ರಾಜಬಿ ಮನಿಯಾರ್ ಎಂಬಾಕೆಯ ಜೊತೆಗೆ 9 ವರ್ಷಗಳ ಹಿಂದೆ ಮದುವೆಯಾಗಿದೆ. ಇವರಿಗೆ ಇಬ್ಬರು ಮಕ್ಕಳು ಕೂಡ ಇದ್ದಾರೆ. ಆದರೆ ಪತ್ನಿಯ ಜೊತೆಗೆ ಹೊಂದಾಣಿಕೆ ಇಲ್ಲ ಎನ್ನುವ ಕಾರಣಕ್ಕೆ ಡ್ಯಾನಿಷ್ ಮತ್ತೊಂದು ಮದುವೆಯಾಗಲು ಮುಂದಾಗಿದ್ದಾನೆ.

ಪತಿ ಎರಡನೇ ಮದುವೆಗೆ ಸಿದ್ಧವಾಗುತ್ತಿದ್ದಾನೆ ಎನ್ನುವುದು ತಿಳಿಯುತ್ತಿದ್ದಂತೆಯೇ  ಪತ್ನಿ ದರ್ಗಾಕ್ಕೆ ಭೇಟಿ ನೀಡಿ ರಂಪಾಟ ಸೃಷ್ಟಿಸಿದ್ದು,  ಈ ವೇಳೆ ಡ್ಯಾನಿಷ್ ಮತ್ತು ರಾಜಬಿ ಮನಿಯಾರ್ ನಡುವೆ ತೀವ್ರ ಜಗಳವಾಗಿದೆ.

ಡ್ಯಾನಿಷ್ ಕೆಲಸಕ್ಕೆ ಹೋಗುತ್ತಿಲ್ಲ ಎಂದು ಪತ್ನಿ ರಾಜಬಿ ಆರೋಪ ಮಾಡಿದರೆ, ಡ್ಯಾನಿಷ್ ಆಕೆಗೆ ಬೇರೊಬ್ಬನ ಜೊತೆಗೆ ಸಂಬಂಧ ಇದೆ. ಕೆಲಸಕ್ಕೆ ಹೋಗುವುದಾಗಿ ಹೇಳಿ ಆತನ ಜೊತೆಗೆ ಹೊರಗಡೆ ಸುತ್ತಾಡುತ್ತಾಳೆ ಎಂದು ಆತ ಆರೋಪಿಸಿದ್ದಾನೆ. ತಾನು ಡೈವೋರ್ಸ್ ನೀಡಲು ಮುಂದಾದರೂ ಆಕೆ ಸ್ಪಂದಿಸುತ್ತಿಲ್ಲ. ಆಕೆಯೊಂದಿಗೆ ಬದುಕಲು  ಇಷ್ಟವಿಲ್ಲದ ಕಾರಣ ಎರಡನೇ ಮದುವೆಗೆ ಮುಂದಾಗಿದ್ದೇನೆ ಎಂದು ಆತ ಹೇಳಿದ್ದಾನೆ. ಇಷ್ಟೆಲ್ಲ ರಾದ್ದಾಂತ ನಡೆದ ಬಳಿಕ ಮದುವೆ ನಿಂತು ಹೋಗಿದೆ.

ಇತ್ತೀಚಿನ ಸುದ್ದಿ